‘ತಾಜ್ ಮಹಲ್ ಗೆ ‘ರಾಮ ಮಹಲ್’ ಅಥವ ‘ಶಿವಮಹಲ್’ ಎಂದು ಮರುನಾಮಕರಣ’..!
ಆಗ್ರಾ: ಐತಿಹಾಸಿಕ ತನ್ನದೇ ಆದ ವಿಶೇಷ ಇತಿಹಾಸ ಹೊಂದಿರುವ ಜಗತ್ ಪ್ರಸಿದ್ಧ ತಾಜ್ ಮಹಲ್ ಗೆ ‘ರಾಮಮಹಲ್’ ಎಂದು ಹೆಸರಿಡಿ ‘ಶಿವ ಮಹಲ್’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಉತ್ತರ ಪ್ರದೇಶದ ಬೈರಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಾಜ್ಮಹಲ್ ಮೂಲತಃ ಶಿವ ದೇವಾಲಯವಾಗಿತ್ತು. ಅದನ್ನು ಮರುನಿರ್ಮಾಣ ಮಾಡಿ ಸಮಾಧಿಯನ್ನು ಸ್ಥಾಪಿಸಲಾಯಿತು ಎಂದು ಸುರೇಂದ್ರ ಸಿಂಗ್ ಹೇಳಿದ್ದು, ಇದನ್ನ ರಾಮಮಹಲ್ ಅಥವ ಶಿವಮಹಲ್ ಎಂದು ಮರುನಾಮಕರಣ ಮಾಡಬೇಕು ಎಂದು ಹೇಳಿ ವಿವಾದಕ್ಕೆ ಕಿಚ್ಚು ಹಚ್ಚಿದ್ದಾರೆ.
`ಬಾಕ್ಸ್ ಆಫೀಸ್ ನಲ್ಲಿ 4ನೇ ದಿನವೂ ‘ದಾಸ’ನ ದರ್ಬಾರ್ : ಒಟ್ಟಾರೆ ಕಲೆಕ್ಷನ್ ಎಷ್ಟು..?
ಯು.ಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಮರಾಠಾ ಯೋಧ ರಾಜ ಶಿವಾಜಿ ಮಹಾರಾಜರ ವಂಶದವರು. ಮುಸ್ಲಿಂ ದಾಳಿಕೋರರು ಭಾರತದ ಸಂಸ್ಕೃತಿಯನ್ನು ನಾಶಪಡಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದರೂ, ಈಗಿನ ಉತ್ತರ ಪ್ರದೇಶದ ಸುವರ್ಣಯುಗವು ಎಲ್ಲವನ್ನೂ ಬದಲಿಸಲಿದೆ ಎಂದು ಹೇಳಿದ್ದಾರೆ. ದೇವರು ಇಚ್ಛಿಸಿದ್ದರೆ, ಶೀಘ್ರದಲ್ಲಿಯೇ #tajmahal ಗೆ ಈಗ ರಾಮ ಮಹಲ್ ಅಥವಾ ಶಿವ ಮಹಲ್ ಆಗಿದೆ ಎಂದು ಎಲ್ಲರಿಗೂ ಗೊತ್ತಾಗುವಂತೆ ಆಗುತ್ತೆ ಎಂದಿದ್ದಾರೆ.








