ಶಾಸಕ, ಸಚಿವ, ಸಂಸದರಿಗೆ ಕೋವಿಡ್ ಸೋಂಕಿತನಿಂದ ತರಾಟೆ
ದಾವಣಗೆರೆ : ಕೋವಿಡ್ ಸೋಂಕಿತ ಯುವಕ ಶಾಸಕ, ಸಚಿವ, ಸಂಸದರಿಗೆ ಒಟ್ಟಿಗೆ ತರಾಟೆ ತೆಗೆದುಕೊಂಡಿರುವ ಘಟನೆ ದಾವಣಗೆರೆಯ ನ್ಯಾಮತಿ ತಾಲೂಕಿನ ಮಾದನಬಾವಿ ಕೋವಿಡ್ ಕೇರ್ ನಲ್ಲಿ ನಡೆದಿದೆ.
ಇಂದು ಮಾದನಬಾವಿ ಕೋವಿಡ್ ಕೇರ್ ಗೆ ಶಾಸಕ ರೇಣುಕಾಚಾರ್ಯ, ಸಚಿವ ಬೈರತಿ ಬಸವರಾಜ್, ಸಂಸದ ಜಿಎಂ ಸಿದ್ದೇಶ್ವರ ಅವರು ಭೇಟಿ ನೀಡಿದ್ದರು.
ಈ ವೇಳೆ ಕೋವಿಡ್ ಸೋಂಕಿತ ಯುವಕ, ಮೂವರಿಗೂ ತರಾಟೆ ತೆಗೆದುಕೊಂಡು ಬೆವರಿಳಿಸಿದ. ನಿನ್ನೆ ರಾತ್ರಿ ನಮಗೆ ಸರಿಯಾಗಿ ಊಟ ಕೊಟ್ಟಿಲ್ಲ.
ಡಾಕ್ಟ್ರನ್ನ ಕರೆದರೆ ಯಾರು ಸರಿಯಾಗಿ ರೆಸ್ಪಾನ್ಸ್ ಮಾಡಲ್ಲ. ಮಾಡೋದನ್ನೆ ಅಚ್ಚುಕಟ್ಟಾಗಿ ಮಾಡಿದ್ರೆ ನಾವು ಸಪೋರ್ಟ್ ಮಾಡ್ತಿವಿ ಎಂದು ಆಕ್ರೋಶ ಹೊರಹಾಕಿದ.
ಯುವಕನ ಕೂಗಾಟದಿಂದ ಸಚಿವ ಬೈರತಿ, ಶಾಸಕ ರೇಣುಕಾಚಾರ್ಯ, ಸಂಸದ ಸಿದ್ದೇಶ್ವರ ಗೆ ಮುಜುಗರ ಉಂಟಾಯಿತು. ಈ ವೇಳೆ ಯುವಕನನ್ನ ಸಂತೈಸಲು ಶಾಸಕ ರೇಣುಕಾಚಾರ್ಯ ಹರಸಾಹಸಪಟ್ಟರು.










