ಪಕ್ಷಕ್ಕಿಂತ ಸೋತವರು ದೊಡ್ಡವರಲ್ಲ : ರೇಣುಕಾಚಾರ್ಯ ಹೇಳಿಕೆ ಮರ್ಮವೇನು.?
ಬೆಂಗಳೂರು : ಸದ್ಯ ಸರ್ಕಾರದಲ್ಲಿ ಸಂಪುಟ ಸರ್ಕಸ್ ಜೋರಾಗಿ ನಡೆಯುತ್ತಿದೆ. ಸಚಿವಾಕಾಂಕ್ಷಿಗಳು ಮಂತ್ರಿಗಿರಿಗಾಗಿ ಗಲ್ಲಿಯಿಂದ ಡೆಲ್ಲಿಯವರೆಗೂ ಲಾಭಿ ನಡೆಸುತ್ತಿದ್ದಾರೆ.
ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್, ಸಿ.ಪಿ ಯೋಗೀಶ್ವರ್, ಹೆಚ್ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಪಕ್ಕ ಎಂದು ಹೇಳಲಾಗುತ್ತಿದೆ.
ಆದ್ರೆ ಇದಕ್ಕೆ ಮೂಲ ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಬಾರದೆಂದು ಒತ್ತಾಯಿಸಿದ್ದಾರೆ.
ಅಂದಹಾಗೆ ಸಂಪುಟ ವಿಸ್ತರಣೆ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸರ್ಕಾರ, ಪಕ್ಷಕ್ಕಿಂತ ಸೋತವರು ದೊಡ್ಡವರಲ್ಲ.
ಪದೇ ಪದೇ ಅವರ ಹೆಸರನ್ನು ಹೇಳುವುದು ಸೂಕ್ತವಲ್ಲ. ಈ ಸಂಬಂಧ ಶಾಸಕರ ಭಾವನೆಗಳನ್ನು ಎಲ್ಲಿ ತಲುಪಿಸಬೇಕೋ, ಎಲ್ಲಿ ಮಾತನಾಡಬೇಕೋ ನಾನು ಅಲ್ಲಿ ಹೇಳಿದ್ದೇನೆ ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಸೇರಿ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ.
ನನ್ನ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತೆ : ವಾಟಾಳ್ ಗೆ ರೇಣುಕಾಚಾರ್ಯ ವಾರ್ನಿಂಗ್
ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಹೊನ್ನಾಳಿ, ನ್ಯಾಮತಿ ಬಗ್ಗೆ ಮಾತ್ರ ಹೇಳಬಲ್ಲೆ.
ರಾಜ್ಯಮಟ್ಟದ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ರಾಜ್ಯಾಧ್ಯಕ್ಷರನ್ನು ಪಕ್ಷದ ಕಚೇರಿಯಲ್ಲಿ ಭೇಟಿ ಮಾಡಿ ನನ್ನ ಹಾಗೂ ಶಾಸಕರ ಭಾವನೆಗಳನ್ನು ಗಮನಕ್ಕೆ ತಂದಿದ್ದೇನೆ.
ಕೆಲವು ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಲು ಕೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಹಾದಿ ಬೀದಿಯಲ್ಲಿ ಮಾತನಾಡಿದರೆ ಸ್ಥಾನಮಾನ ಸಿಗುವುದಿಲ್ಲ. ಸುಖಾ ಸುಮ್ಮನೆ ಬಡಿದುಕೊಂಡರೆ ಏನೂ ಸಿಗುವುದಿಲ್ಲ ಎಂದರು. ಸಂಪುಟ ವಿಸ್ತರಣೆ ಯಾವಾಗ ನಡೆಯಲಿದೆ ಎಂಬುದು ನಮಗೆ ಗೊತ್ತಿಲ್ಲ.
ಮಸ್ಕಿ, ಬಸವಕಲ್ಯಾಣ ಬೈ ಎಲೆಕ್ಷನ್ : ಸ್ಪರ್ಧೆಯಿಂದ ಹಿಂದೆ ಸರಿದ ಜೆಡಿಎಸ್
ಪರಿಸ್ಥಿತಿಗೆ ಅನುಗುಣವಾಗಿ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಬಾರಿ ತಮಗೆ ಅವಕಾಶ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel