ಸಚಿವಸ್ಥಾನ ತ್ಯಾಗ ಮಾಡ್ಲಿ : `ಸಾಹುಕಾರ್’ ವಿರುದ್ಧ ಬುಸುಗುಟ್ಟಿದ ರೇಣುಕಾಚಾರ್ಯ
ಬೆಂಗಳೂರು : ಸಚಿವ ಸಂಪುಟ ಹಿನ್ನೆಲೆ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತೊಮ್ಮೆ ಬುಸುಗುಟ್ಟಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ವಿಧಾನಸಭೆ ಚುನಾವಣೆಯಲ್ಲಿ ಸೋತವರನ್ನು ಮಂತ್ರಿ ಮಾಡುವುದಾದರೆ ಜನರಿಂದ ಆಯ್ಕೆ ಆದವರು ಏನು ಮಾಡಬೇಕು. ಬಿಎಸ್ ವೈ ಚದುರಂಗದಾಟಕ್ಕೆ ಹೈಕಮಾಂಡ್ ಸುಸ್ತು
ಸೋತವರನ್ನು ಮಂತ್ರಿ ಮಾಡಲು ಹೊರಟವರು ಮೊದಲು ತಮ್ಮ ಸ್ಥಾನವನ್ನು ತ್ಯಾಗ ಮಾಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೆ ಟಾಂಗ್ ನೀಡಿದರು.ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ, ಬಿಎಸ್‍ವೈ ವಿಶ್ವಾಸದ ಪುನರುಚ್ಛಾರ; ಹೇಳಿಕೆಯಲ್ಲೇ ಗೊಂದಲ..!
ಇನ್ನು ಚುನಾವಣೆಯಲ್ಲಿ ಸೋತವರನ್ನೇ ಮಂತ್ರಿ ಮಾಡುತ್ತೇನೆ ಎಂದು ಹೇಳಿದರೆ ಜನರಿಂದ ಆಯ್ಕೆಯಾದವರು ಸುಮ್ಮನೆ ಇರಬೇಕ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಹಾಗೊಂದು ವೇಳೆ ಪರಾಭವಗೊಂಡವರೇ ಮಂತ್ರಿಗಳಾಗುವುದಾದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರನ್ನು ಕರೆತಂದು ಮಂತ್ರಿ ಮಾಡಲಿ, ನಮ್ಮದೇನೂ ಅಭ್ಯಂತರವಿಲ್ಲ ಎಂದು ಗರಂ ಆದರು.
ಚುನಾವಣಯಲ್ಲಿ ಪರಾಭವಗೊಂಡವರಿಗೆ ಮಂತ್ರಿಸ್ಥಾನ ನೀಡಬಾರದೆಂದು ನಾವು ಈಗಾಗಲೇ ದೆಹಲಿ ನಾಯಕರು, ರಾಜ್ಯಾಧ್ಯಕ್ಷರಿಗೆ, ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಇದು ಕೇವಲ ನನ್ನೊಬ್ಬನ ಅಭಿಪ್ರಾಯವಲ್ಲ.
ಬಹುತೇಕ ಶಾಸಕರ ಒಮ್ಮತದ ಅಭಿಪ್ರಾಯವೂ ಇದೇ ಆಗಿದೆ. ನಾವು ಕಾಂಗ್ರೆಸ್-ಜೆಡಿಎಸ್ ನಿಂದ ಬಂದಿರುವವರಿಗೆ ಮಂತ್ರಿಸ್ಥಾನ ಕೊಡಬಾರದು ಎಂದು ಎಲ್ಲೂ ಹೇಳಿಲ್ಲ.
ನಮ್ಮ 105 ಶಾಸಕರು, ಜೊತೆಗೆ 17 ಶಾಸಕರು ರಾಜೀನಾಮೆ ಕೊಟ್ಟು ಬಂದಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳುವ ಮೂಲಕ ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವಸ್ಥಾನ ನೀಡಬಾರದೆಂದು ಆಗ್ರಹಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










