ನನ್ನ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತೆ : ವಾಟಾಳ್ ಗೆ ರೇಣುಕಾಚಾರ್ಯ ವಾರ್ನಿಂಗ್
ಬೆಂಗಳೂರು : ಮರಾಠ ಅಭಿವೃದ್ಧಿ ಪ್ರಾಧಿಕಾರಿ ರಚಿಸಿರುವ “ಬಿಎಸ್ ಯಡಿಯೂರಪ್ಪ ಒಬ್ಬ ಅವಿವೇಕಿ ಮುಖ್ಯಮಂತ್ರಿ. ಅವರಿಗೆ ಕನ್ನಡದ ಬಗ್ಗೆ ಅಭಿಮಾನ ಇಲ್ಲ” ಎಂಬ ಕನ್ನಡಪರ ವಾಟಾಳ್ ನಾಗರಾಜ್ ಅವರ ಹೇಳಿಕೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ವಾಟಾಳ್ ನಾಗರಾಜ್ ಬಳಸಿರುವ ಪದ ಅಕ್ಷಮ್ಯವಾಗಿದೆ.
ಕೂಡಲೇ ವಾಟಾಳ್ ನಾಗರಾಜ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸುದ್ದಿಗಾರರಿಂದಿಗೆ ಮಾತನಾಡಿದ ರೇಣುಕಾಚಾರ್ಯ, ಕನ್ನಡ ಪರ ಸಂಘಟನೆಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ನೀಡಿದ ಹೇಳಿಕೆಗೆ ನನ್ನ ಬೆಂಬಲವಿದೆ.
ಅವರ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ಯತ್ನಾಳ್ ಸರಿಯಾಗಿಯೇ ಹೇಳಿದ್ದಾರೆ.
ಯಡಿಯೂರಪ್ಪನವರ ವಯಸ್ಸು, ಅವರಿಗಿರುವ ರಾಜಕೀಯ ಅನುಭವ ಅಪಾರ. ಅವರಿಗೆ ನೀತಿಪಾಠ ಹೇಳಲು ಹೊರಟಿರುವ ವಾಟಾಳ್ ನಾಗರಾಜ್ ಎಷ್ಟು ಬಾರಿ ಜನರಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ಬಗ್ಗೆ ನೀವು ಬಳಸಿದ ಪದಗಳು ಎಂತದ್ದು ಎಂದು ವಾಟಾಳ್ ನಾಗರಾಜ್ ಅವರನ್ನು ಪ್ರಶ್ನಿಸಿದ ರೇಣುಕಾಚಾರ್ಯ, ನಿಮ್ಮ ನಾಲಿಗೆ ಮೇಲೆ ಹಿಡಿತ ಇರಬೇಕು.
ಮಸ್ಕಿ, ಬಸವಕಲ್ಯಾಣ ಬೈ ಎಲೆಕ್ಷನ್ : ಸ್ಪರ್ಧೆಯಿಂದ ಹಿಂದೆ ಸರಿದ ಜೆಡಿಎಸ್
ಕನ್ನಡ ಭಾಷೆಯಲ್ಲಿ ಎಂತೆಂತಹ ಶಬ್ಧಗಳಿವೆ. ಗೌರವಯುತವಾದ ಶಬ್ಧಗಳನ್ನು ಬಳಸುವ ಬದಲಾಗಿ ಅವಿವೇಕಿ ಪದ ಬಳಕೆ ಮಾಡಿದ್ದೀರಿ.
ಯಡಿಯೂರಪ್ಪರವರ ವಯಸ್ಸು, ಅನುಭವ, ಅವರಿಗಿರುವ ಕನ್ನಡದ ಬದ್ಧತೆ ಬಗ್ಗೆ ಪ್ರಶ್ನೆ ಮಾಡುವ ನೈತಿಕ ಹಕ್ಕು ನಿಮಗಿಲ್ಲ.
ಇನ್ನೊಮ್ಮೆ ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ನಾನು ನನ್ನ ಧಾಟಿಯಲ್ಲಿ, ನನ್ನ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಜನರ ಸಂಕಷ್ಟ ಪರಿಹರಿಸುವುದು ಮುಖ್ಯವೇ ಹೊರತು, ಬಂದ್ ಮಾಡುವುದು ಮುಖ್ಯವಲ್ಲ ಎಂದು ಜನಸಾಮಾನ್ಯರು ಹೇಳುತ್ತಿದ್ದಾರೆ.
ಬಂದ್ ಯಾಕೆ ಬೇಕು? ಅಂತಹ ತುರ್ತು ವಿಷಯ ಏನಿದೆ? ಸಂಘಟನೆಗಳು ಜನರಿಗೆ ಮಾರ್ಗದರ್ಶನ ಮಾಡಬೇಕೇ ವಿನಃ ಬಂದ್ ಗೆ ಕರೆ ಕೊಟ್ಟು ಪ್ರಚೋದನೆ ನೀಡುವುದು ಸರಿಯಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.
ಕೆಪಿಸಿಸಿ ಕಚೇರಿಗೆ ಬನ್ನಿ, ಸಂವಿಧಾನ ಪಾಠ ಕಲಿಸ್ತೇವೆ: ಸಿ.ಟಿ ರವಿಗೆ ಕಾಂಗ್ರೆಸ್ ಪಂಥಾಹ್ವಾನ..!
ಅಲ್ಲದೆ ಜನರಿಗೆ ಬಂದ್ ನಿಂದ ಸಂಕಷ್ಟ ಎದುರಾದರೆ ನೀವೇ ಹೊಣೆಯಾಗುತ್ತೀರಿ. ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ.
ಈಗಾಗಲೇ ಮುಖ್ಯಮಂತ್ರಿಗಳು ಕೂಡ ಇದನ್ನು ತಿಳಿಸಿದ್ದಾರೆ. ನಾಳೆ ಮತ್ತೊಮ್ಮೆ ಪರಿಶೀಲಿಸಿ ಹೋರಾಟದ ಬದಲು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಲಹೆ ಕೊಡಿ.
ಸಲಹೆ ಕೊಡುವ ಬದಲಾಗಿ ಧಮ್ಕಿ ಹಾಕುವುದು ಸರಿಯಲ್ಲ ಎಂದು ರೇಣುಕಾಚಾರ್ಯ ಸಲಹೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel