ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ದರ್ಶನ್ ಆಂಡ್ ಗ್ಯಾಂಗ್ ಗೆ ಸಂಕಷ್ಟ ಹೆಚ್ಚಾಗುತ್ತ ಹೋಗುತ್ತಿದೆ. ಆರೋಪಿಗಳ ವಿರುದ್ಧ ಪೊಲೀಸರು ಬಲವಾದ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.
ಈಗಾಗಲೇ ಈ ಕೊಲೆ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ತಿನ್ನುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಗೆದಷ್ಟು ಸಾಕ್ಷಿಗಳು ಹೊರ ಬರುತ್ತಿವೆ. ಈಗ ಆರೋಪಿಗಳ ಕೂದಲು ಸ್ಯಾಂಪಲ್ ಡಿಎನ್‌ಎ (DNA) ಮ್ಯಾಚ್ ಆಗಿದೆ ಎಫ್‌ಎಸ್‌ಎಲ್ ರಿಪೋರ್ಟ್‌ಗಳಲ್ಲಿ ಬಹುಮುಖ್ಯವಾದ ಡಿಎನ್‌ಎ ರಿಪೋರ್ಟ್ ಪೊಲೀಸರ ಕೈಗೆ ಸಿಕ್ಕಿದೆ. ಈ ಮೂಲಕ ದರ್ಶನ್ ಜಸ್ಟ್ ರಕ್ತ ಮಾತ್ರ ಅಲ್ಲದೇ, ಆರೋಪಿಗಳ ಕೂದಲು ಕೂಡ ಸಂಕಷ್ಟ ತಂದೊಡ್ಡುತ್ತಾ ಇದೆ.
ರೇಣುಕಾಸ್ವಾಮಿ ಶವವನ್ನು ಬಿಸಾಡುವಾಗ ಸ್ಕಾರ್ಪಿಯೋ ಕಾರಲ್ಲಿ ನಾಲ್ವರು ಆರೋಪಿಗಳು ಹೋಗಿದ್ದರು. ಆ ಸ್ಕಾರ್ಪಿಯೋ ಕಾರಿನಲ್ಲಿ ಆರೋಪಿಗಳ ಕೂದಲು ಉದುರಿತ್ತು. ಆ ಉದುರಿದ ಕೂದಲನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಡಿಎನ್ ಎ ವರದಿ ಬಂದಿದ್ದು, ಆರೋಪಿಗಳ ಕೂದಲು ಕೂಡ ಮ್ಯಾಚ್ ಆಗಿವೆ ಎನ್ನಲಾಗಿದೆ.








