ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆರೋಪಿಗಳಿಗೆ ಢವ ಢವ ಶುರುವಾಗಿದೆ. ಕೊಲೆಗೂ ಮುನ್ನ ರೇಣುಕಾಸ್ವಾಮಿ (Renukaswamy Murder Case) ದಯನೀಯ ಸ್ಥಿತಿಯಲ್ಲಿದ್ದ ಫೋಟೋ ಸದ್ಯ ವೈರಲ್ ಆಗಿದೆ.
ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚುತ್ತಿರುವ ಫೋಟೋ ವೈರಲ್ ಆಗಿದ್ದು, ಜನರು ಕಂಡು ಬೆಚ್ಚಿ ಬಿದ್ದಿದ್ದಾರೆ. ಬಡಕಲು ದೇಹದ ರೇಣುಕಾಸ್ವಾಮಿ ಕಣ್ಣೀರಿಡುತ್ತ, ಗೋಗರೆಯುತ್ತಿರುವ ಸ್ಥಿತಿಯಲ್ಲಿ ಫೋಟೋದಲ್ಲಿದ್ದಾರೆ. ಮೈಮೇಲೆ ಬಟ್ಟಿಯಿಲ್ಲದೇ ಆರೋಪಿಗಳ ಮುಂದೆ, ನನ್ನನ್ನು ಬಿಟ್ಟುಬಿಡಿ ಎಂಬಂತೆ ಸಂತ್ರಸ್ತ ಅಂಗಲಾಚುತ್ತಿರುವಂತೆ ಆ ಫೋಟೋ ಇದೆ. ಆದರೂ ಪಾಪಿಗಳು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಫೋಟೋ ಕಂಡು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರೇಣುಕಾಸ್ವಾಮಿ ಹಿಂದೆ ಲಾರಿಗಳು ನಿಂತಿವೆ. ನೆಲದಲ್ಲಿ ಕುಳಿತಿರುವ ಸಂತ್ರಸ್ತ ಕೈಚಾಚಿ ಗೋಗರೆಯುತ್ತಿರುವ ಸ್ಥಿತಿಯಲ್ಲಿದ್ದಾನೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಕೋರ್ಟ್ ಗೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ವಿಶೇಷ ಕೋರ್ಟ್ ರಚಿಸಿ, ವಿಚಾರಣೆ ನಡೆಸುವಂತೆಯೂ ಮನವಿ ಮಾಡಲಾಗಿದೆ. ಆದರೆ, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.