ಬೀಜಿಂಗ್ : ಚೀನಾದಲ್ಲಿ ಹುಟ್ಟಿ, ಅಲ್ಲಿ ಮರಣಮೃದಂಗ ಬಾರಿಸಿದ ಕೊರೊನಾ ವೈರಸ್ ಸದ್ಯ ಭಾರತ ಸೇರಿ ಹಲವರು ರಾಷ್ಟ್ರಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸುತ್ತಿದೆ.ಭಾರತದಲ್ಲಿ ಸದ್ಯ ಇರುವ ವೇಗದಲ್ಲೇ ಕೊರೊನಾ ಹರಡಿದರೆ ಇನ್ನೆರಡೇ ದಿನಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ 1000 ಗಡಿ ದಾಟಲಿದೆ. ಈಗ ಇಡೀ ದೇಶವೇ ಲಾಕ್ ಡೌನ್ ಆಗಿದ್ದು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಇನ್ನೇನೂ ಸಿಗುತ್ತಿಲ್ಲ. ಶಾಪಿಂಗ್ ಮಾಲ್ ಗಳು, ಸಿನಿಮಾ ಥಿಯೇಟರ್ ಗಳೆಲ್ಲ ಬಂದ್ ಆಗಿವೆ. ಜನರು ಹೊರಗೆ ಬಾರದ ಪರಿಸ್ಥಿತಿ ಎದುರಾಗಿದೆ.
ಆದ್ರೆ ಅತ್ತ ಚೀನಾದಲ್ಲಿ ಎಲ್ಲವೂ ಸಹಜಸ್ಥಿತಿಗೆ ಬರುತ್ತಿದ್ದು, 500ಕ್ಕೂ ಹೆಚ್ಚು ಸಿನಿಮಾ ಥಿಯೇಟರ್ ಗಳು ಮರುಪ್ರಾರಂಭವಾಗಿವೆ. ಕಳೆದ ಶುಕ್ರವಾರವೇ 486 ಸಿನಿಮಾ ಥಿಯೇಟರ್ ಗಳಲ್ಲಿ ಚಿತ್ರಪ್ರದರ್ಶನ ಶುರುವಾಗಿತ್ತು. ಈ ವೀಕೆಂಡ್ ನಷ್ಟೊತ್ತಿಗೆ 507 ಥಿಯೇಟರ್ ಗಳು ಮರುಪ್ರಾರಂಭಗೊಂಡಿವೆ.
ಚೀನಾದ ಕ್ಸಿನ್ ಜಿಯಾಂಗ್, ಶಾಂಗ್‌ಡಾಂಗ್, ಸಿಚುವಾನ್, ಫುಜಿಯಾನ್ ಮತ್ತು ಗುವಾಂಗ್‌ಡಾAಗ್ ಪ್ರಾಂತ್ಯಗಳಲ್ಲಿರುವ ಸಿನಿಮಾ ಥಿಯೇಟರ್ ಗಳು ಕಾರ್ಯಾರಂಭ ಮಾಡಿದ್ದು, ಏಪ್ರಿಲ್ ನಲ್ಲಿ ಮತ್ತಷ್ಟು ಥಿಯೇಟರ್ ಗಳು ಪ್ರಾರಂಭಗೊಳ್ಳಲಿವೆ ಎನ್ನಲಾಗಿದೆ.








