ರೋಮೆನಿಯಾ ಮುಖಾಂತರ ಭಾರತಕ್ಕೆ ಮರಳುತ್ತಿರುವ ಅನಿವಾಸಿ ಭಾರತೀಯರು – Saaksha Tv
ಉಕ್ರೇನ್: ರಷ್ಯಾ- ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯರನ್ನು ರೊಮೇನಿಯಾಗೆ ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಗಿದೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರು ಇಲ್ಲಿಯವರೆಗೆ ತಮ್ಮ ಜೀವ ಉಳಿಸಿಕೊಳ್ಳಲು ಮೆಟ್ರೋ ಸುರಂಗಗಳಲ್ಲಿ ಅಡಗಿ ಕುಳಿತಿದ್ದರು. ಇದೀಗ ಅಡಗಿ ಕುಳಿತಿದ್ದ 240 ವಿದ್ಯಾರ್ಥಿಗಳನ್ನು 4 ಬಸ್ಗಳಲ್ಲಿ ಉಕ್ರೇನ್-ರೊಮೇನಿಯಾ ಗಡಿಗೆ ಸ್ಥಳಾಂತರಿಸಲಾಗುತ್ತಿದೆ.
ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಭಾಗವಾಗಿ 1 ಸಾವಿರಕ್ಕೂ ಹೆಚ್ಚು ಏರ್ ಇಂಡಿಯಾ ಮುಖಾಂತರ ಭಾರತಕ್ಕೆ ಕರೆತರಲು ಯೋಜನೆ ರೂಪಿಸಲಾಗಿದೆ. ರೋಮೆನಿಯಾದಿಂದ 13 ಕಿ.ಮೀ ನಡಿಗೆಯ ಮೂಲಕ ಏರ್ಲಿಫ್ಟ್ ಮಾಡಲಾಗುವ ಜಾಗದವರೆಗೆ ಹೋಗಬೇಕಿದೆ ಎಂದು ವರದಿಗಳು ತಿಳಿಸಿವೆ.
ರೊಮೇನಿಯಾ ಸರ್ಕಾರದೊಂದಿಗೆ ಭಾರತೀಯ ವಿದೇಶಾಂಗ ಇಲಾಖೆ ಸತತ ಸಂಪರ್ಕದಲ್ಲಿದೆ. ಏರ್ ಇಂಡಿಯಾ ವತಿಯಿಂದ 2 ವಿಮಾನಗಳನ್ನು ಈಗಾಗಲೇ ಕಳುಹಿಸಲಾಗಿದೆ. ಸದ್ಯ ಭಾರತೀಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿರುವ ಬಸ್ಸುಗಳು ರೊಮೇನಿಯಾ ತಲುಪಲು 800 ಕಿ.ಮೀ ಪ್ರಯಾಣಿಸಬೇಕಿದೆ. ಮೊದಲ ಹಂತದ ಸ್ಥಳಾಂತರ ಮುಕ್ತಾಯವಾಗಲು ಶನಿವಾರ ಮಧ್ಯಾಹ್ನದವರೆಗೂ ಸಮಯ ತಗುಲಬಹುದು ಎಂದು ವರದಿಗಳು ತಿಳಿಸಿವೆ.









