ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರ ರಾಜೀನಾಮೆ ಸುದ್ದಿಯಲ್ಲಿರುವ ನಡುವೆಯೇ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸರ್ಕಾರದಲ್ಲೂ ರಾಜೀನಾಮೆ ಪರ್ವ ಜೋರಾಗಿದೆ.
₹150 ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ಮೇಯರ್ ಇಂದ್ರಾಣಿ ಅವರ ಪತಿ ಪೊನ್ ವಸಂತ್ ಅವರನ್ನು ಬಂಧಿಸಿರುವ ಹಿನ್ನೆಲೆ, ಸಿಎಂ ಸ್ಟಾಲಿನ್ ಆದೇಶದ ಮೇರೆಗೆ 5 ವಲಯ ಅಧ್ಯಕ್ಷರು ಹಾಗೂ 2 ಸ್ಥಾಯಿ ಸಮಿತಿ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ.
ಈಗ ಇಂದ್ರಾಣಿ (ಡಿಎಂಕೆ) ಕೂಡ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಏಕಕಾಲದಲ್ಲಿ ನಡೆಯುತ್ತಿರುವ ಈ ರಾಜೀನಾಮೆ ಬೆಳವಣಿಗೆ, ದಕ್ಷಿಣ ಭಾರತದ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.








