ಬಾಗಲಕೋಟೆ : ಬಾಗಲಕೋಟೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ. ಭಾರತ-ಚೀನಾ ಗಡಿಯಲ್ಲಿ ಸೈನಿಕರ ಮಧ್ಯೆ ಸಂಘರ್ಷ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮೌನವೇಕೆ ಎಂದು ರಾಹುಲ್ ಟ್ವೀಟ್ ಮಾಡಿದ್ದರು.
ಈ ವಿಚಾರವಾಗಿ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ,ದಳವಾಯಿ ಅನ್ನೋ ಸೈನಿಕ, ಹಿಮಾಲಯನ್ ಬ್ಲಂಡರ್ ಪುಸ್ತಕ ಬರೆದಿದ್ದಾರೆ. ಭಾರತದ ಸೈನಿಕನೊಬ್ಬ ತನ್ನ ಕೈಯಲ್ಲಿರುವ ಕಟ್ಟಕಡೆಯ ಕಾಡಸೂಸನ್ನ ಚೀನಾಕಡೆಗೆ ಎಸೆದು ಪ್ರಜ್ಞೆ ತಪ್ಪಿಬಿದ್ದಾಗ. ಈ ದೇಶದ ಪ್ರಧಾನಮಂತ್ರಿ ಲಂಡನ್ ನಲ್ಲಿ ವಿಹರಿಸುತ್ತಿದ್ದರು ಎಂದು ಬರೆದಿದ್ದಾರೆ. ಈ ಪುಸ್ತಕ ಓದಿದಮೇಲೂ ಯಾರಿಗಾದರೂ ನೆಹರೂ ಕುಟುಂಬದ ಬಗ್ಗೆ ಗೌರವ ಉಳಿದರೇ ನಿಮ್ಮ ರಾಷ್ಟ್ರ ಪ್ರೇಮಕ್ಕೆ ನನ್ನ ಧಿಕ್ಕಾರ ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದರು.
ಇದು ನಾನು ಹೇಳಿದ್ದಲ್ಲ, ಯೋಧ ದಳವಾಯಿ ಹೇಳಿದ ಮಾತಿದು. ಅವತ್ತಿನ ಭಾರತವಲ್ಲ, ಇದು ನರೇಂದ್ರ ಮೋದಿಯವರ ಭಾರತ ಎಂದು ರಾಹುಲ್ ಗಾಂಧಿ ಅವರಿಗೆ ನಿಮ್ಮ ಮೂಲಕ ಹೇಳುತ್ತೇನೆ ಎಂದು ಸಚಿವರು ಹೇಳಿದರು.








