ಮಡಿಕೇರಿ: ಸರ್ಕಾರಿ ಸೇವೆಯಿಂದ ನಿವೃತ್ತಿ ಪಡೆದು ಈಗಷ್ಟೇ ಒಂದು ತಿಂಗಳು ಕೂಡ ತುಂಬಿರಲಿಲ್ಲ. ಆದರೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನಿವೃತ್ತ ಎಎಸ್‌ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ನಡೆದಿರುವುದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಾದೇಗೋಡು ಗ್ರಾಮದಲ್ಲಿ.
ಎಂ.ಎಸ್. ಈರಪ್ಪ ಆತ್ಮಹತ್ಯೆ ಮಾಡಿಕೊಂಡ ಎಎಸ್‌ಐ. ಕಳೆದ ಮೇ.30 ರಂದು ಸೇವೆಯಿಂದ ನಿವೃತ್ತಿಯಾಗಿದ್ದರು. ಈರಪ್ಪ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸಿದ್ದರು. ಇಂದು ಮುಂಜಾನೆ ತಮ್ಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈರಪ್ಪ ಅವರು
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಕೆಟ್ ದೇವರ ದರ್ಶನ ಪಡೆಯಲು ಬಂದ ಗ್ರೇಟೆಸ್ಟ್ ಆಫ್ ಆಲ್ ಟೈಮ್” ಲಿಯೊನಾಲ್ ಮೆಸ್ಸಿ..!
ಲಿಯೊನಾಲ್ ಮೆಸ್ಸಿ.. ಫುಟ್‍ಬಾಲ್ ಜಗತ್ತಿನ ಅಪ್ರತಿಮ ಹಾಗೂ ಸರ್ವಶ್ರೇಷ್ಠ ಆಟಗಾರ.. ಅರ್ಜೆಂಟಿನಾದ ದಂತಕಥೆ.. ವಿಶ್ವ ಫುಟ್‍ಬಾಲ್ ಕ್ಲಬ್‍ಗಳ ಸೂಪರ್ ಡೂಪರ್ ಪ್ಲೇಯರ್.. ಕೋಟ್ಯಂತರ ಅಭಿಮಾನಿಗಳ ಎವರ್ ಗ್ರೀನ್...








