ಮಂಗಳೂರು: ಹುಟ್ಟೂರು ಉಪ್ಪಿನಂಗಡಿಯ ಬಾರ್ಯದಿಂದ ಯೋಧರೊಬ್ಬರು ವಾಪಸ್ ಕರ್ತವ್ಯಕ್ಕೆ ಹಾಜರಾಗಿ ವಾರ ಪೂರ್ಣಗೊಳ್ಳುವ ಮೊದಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಮಥುರಾದ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮದ 34 ವರ್ಷದ ಯೋಧ ಸಂದೇಶ್ ಶೆಟ್ಟಿ, ವಾರದ ಹಿಂದಷ್ಟೆ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ತೆರಳಿದ್ದರು. ಉತ್ತರ ಪ್ರದೇಶದ ಮಥುರಾದ ಸೇನಾ ಕ್ಯಾಂಪಸ್‍ಗೆ ಹೋಗಿದ್ದರು. ಕ್ಯಾಂಪಸ್ ತಲುಪುತ್ತಿದ್ದಂತೆ ಸಂದೇಶ್ ಶೆಟ್ಟಿ ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಕೇಂದ್ರದಲ್ಲಿರುವಾಗಲೇ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಸಂದೇಶ್ ಶೆಟ್ಟಿ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಕುಟುಂಸ್ಥರು ತಿಳಿಸಿದ್ದಾರೆ.








