ಮೌಂಟ್ಮೌಂಗಾನುಯಿ: ಟೀಂ ಇಂಡಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡ ಜಯಭೇರಿ ಬಾರಿಸಿದೆ. ಭಾರತದ ವಿರುದ್ಧ ಕಿವೀಸ್ ತಂಡ ೫ ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯನ್ನು ೩-೦ ಅಂತರದಲ್ಲಿ ಕ್ಲೀನ್ ಸ್ಪೀಪ್ ಮಾಡಿದೆ.
ಭಾರತ ನೀಡಿದ್ದ ೨೯೭ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಕಿವೀಸ್ ಪಡೆಗೆ ಆರಂಭಿಕರಾದ ಮಾರ್ಟಿನ್ ಗಪ್ಟಿಲ್ (೬೬ರನ್), ಹೆನ್ರಿ ನಿಕೋಲಸ್ (೮೦ರನ್) ಭರ್ಜರಿ ಸ್ಟಾರ್ಟ್ ನೀಡಿದ್ರು. ಬಳಿಕ ಕ್ರೀಸ್ ಗೆ ಬಂದ ನಾಯಕ ವಿಲಿಯಮ್ಸನ್( ೨೨ರನ್) ಸಮಯೋಚಿತ ಪ್ರದರ್ಶನ ನೀಡಿದ್ರು. ನಂತರ ನಾಥಮ್ ಜೊತೆಗೂಡಿದ ಗ್ರಾಂಡ್ ಹೋಮ್ (೫೪ ರನ್) ಭಾರತೀಯ ಬೌಲರ್ ಗಳ ಬೆವರಿಸಿದ್ರು. ಅಂತಿಮವಾಗಿ ಕೇವಲ ೪೭.೧ ಓವರ್ ನಲ್ಲಿ ಕಿವೀಸ್ ೫ ವಿಕೆಟ್ ಗಳನ್ನು ಕಳೆದುಕೊಂಡು ಗುರಿ ಮುಟ್ಟಿತು.
ಒಂದು ಕಡೆ ಕಿವೀಸ್ ಆರಂಭಿಕರು ಭಾರತೀಯ ಬೌಲರ್ ಗಳ ಮೇಲೆ ಸವಾರಿ ಮಾಡಿದರೆ, ಆರಂಭದಿಂದಲೂ ಕಪ್ಪು ಕುದುರೆಗಳ ವಿಕೆಟ್ ಪಡೆಯಲು ಟೀಂ ಇಂಡಿಯಾ ಬೌಲರ್ ಗಳು ಪರದಾಡಿದರು.
ಭಾರತದ ಪರ ಯುಜವೇಂಜ್ರ ಚಹಲ್ ೩ ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ತಲಾ ೧ ವಿಕೆಟ್ ಪಡೆದರು.
ಇನ್ನು ೮೦ ರನ್ ಸಿಡಿಸಿ ಕಿವೀಸ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಹೆನ್ರಿ ನಿಕೋಲಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹಾಗೆ ಸರಣಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಸ್ ಟೇಲರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನಂದಿನಿ ಹಾಲಿನ ದರ ಏರಿಕೆ :KMF ಅಧ್ಯಕ್ಷರ ಸ್ಪಷ್ಟನೆ
KMF (ಕರ್ನಾಟಕ ಹಾಲು ಒಕ್ಕೂಟ) ಅಧ್ಯಕ್ಷ ಭೀಮಾ ನಾಯ್ಕ ಅವರು, ಸದ್ಯಕ್ಕೆ ನಂದಿನಿ ಹಾಲಿನ ದರದಲ್ಲಿ ಯಾವುದೇ ಏರಿಕೆ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ...