Karnataka | ಕೋವಿಡ್ ನಿಯಮ ಸಡಿಲಿಕೆ.. ಯಾವುದಕ್ಕೆ ನಿರ್ಬಂಧ.. ಯಾವುದಕ್ಕೆ ಇಲ್ಲ..?
ಬೆಂಗಳೂರು : ಕೊರೊನಾ ಸೋಂಕು ಮೂರನೇ ಅಲೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ 50 : 50 ರೂಲ್ಸ್ ಜಾರಿ ಮಾಡಿತ್ತು.
ಈ ರೂಲ್ಸ್ ಸಡಿಲಿಕೆ ಮಾಡುವಂತೆ ಹೋಟೆಲ್ ಉದ್ಯಮ, ಮದ್ಯ ಮಾರಾಟ ಉದ್ಯಮ, ಸಿನಿಮಾ, ನಾಟಕ ರಂಗಗಳಿಂದ ಬೇಡಿಕೆಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಸಡಿಲಿಕೆ, ಬೆಂಗಳೂರಲ್ಲಿ ಶಾಲಾರಂಭ ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಸಭೆ ನಡೆಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆ ಸಚಿವರು, ಹಿರಿಯ ಅಧಿಕಾರಿಗಳು, ಕೋವಿಡ್ ತಜ್ಞರು ಭಾಗವಹಿಸಿದ್ದರು.
ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್ ಸಭೆಯಲ್ಲಿ ತೆಗೆದುಕೊಳ್ಳಲಾಗದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.
*ಯಾವುದಕ್ಕೆ ನಿರ್ಬಂಧ ಇಲ್ಲ
ಜನವರಿ 31 ರಿಂದ ನೈಟ್ ಕರ್ಫ್ಯೂ ಇರಲ್ಲ
ಹೋಟೆಲ್, ರೆಸ್ಟೋರೆಂಟ್ ಗಳಿಗೆ 100% ಸೀಟಿಂಗ್
ಬೆಂಗಳೂರಿನಲ್ಲಿ 1 ರಿಂದ 9 ಶಾಲೆಗಳು ಓಪನ್
ದೇವಾಲಗಳಲ್ಲಿ ಸೇವೆಗಳಿಗೆ ಅವಕಾಶ
ಕಚೇರಿಗಳಲ್ಲಿ ಶೇ.100 ಸಿಬ್ಬಂದಿಗೆ ಅವಕಾಶ
*ಯಾವುದಕ್ಕೆ ನಿರ್ಬಂಧ
ಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ 50% ಸೀಟಿಂಗ್
ಜಿಮ್, ಕ್ರೀಡಾಂಗಣದಲ್ಲಿ 50% ಸೀಟಿಂಗ್
ಮದುವೆಗಳಿಗೆ ಒಳಾಂಗಣ 200, ಹೊರಾಂಗಣ 300 ಜನ
ಹೋರಾಟ, ಪ್ರತಿಭಟನೆ, ಜಾತ್ರೆಗೆ ಅವಕಾಶವಿಲ್ಲ