ದಿನಕ್ಕೊಂದು ತಿರುವು ಪಡೆಯುತ್ತಿರುವ ಸುಶಾಂತ್ ಸಾವಿನ ಪ್ರಕರಣ ಸದ್ಯಕ್ಕೆ ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಈಗಾಗಲೇ ಈ ಕೇಸ್ ಸಿಬಿಐಗೆ ವರ್ಗಾವಣೆಗೊಂಡಿರುವುದು ಹಲವರ ಸಂತೋಷಕ್ಕೆ ಕಾರಣವಾಗಿದ್ರೆ, ಇನ್ನೂ ಕೆಲವರಲ್ಲಿ ನಡುಕ ಹುಟ್ಟಿಸಿದೆ. ಈ ವಿಚಾರವಾಗಿ ಹಲವಾರು ಆರೋಪಗಳನ್ನು ಹೊತ್ತಿರುವ ಸುಶಾಂತ್ ಪ್ರೇಯಸಿ ರಿಯಾಗೆ ಇಡಿ ಆತಂಕ ಶುರುವಾಗಿಬಿಟ್ಟಿದೆ. ಅಗ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿರುವ ರಿಯಾ ವಿಚಾರಣೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ. ನಟ ಸುಶಾಂತ್‌ಸಿಂಗ್ ಅವರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಅನುಮಾನದ ಮೇಲೆ ಮನಿ ಲಾಂಡರಿಂಗ್ ತಡೆ ಕಾಯ್ದೆ ಅನ್ವಯ ಆಗಸ್ಟ್07 ರಂದು ವಿಚಾರಣೆಗೆ ಹಾಜರಾಗುವಂತೆ ರಿಯಾ ಚಕ್ರವರ್ತಿ ಗೆ ಇಡಿ ಸಮನ್ಸ್‌ಜಾರಿ ಮಾಡಿದ್ದು, ನೆಟ್ಟಿಗರ ಒತ್ತಡಗಳಿಗೆ ಪ್ರತಿಫಲ ಸಿಕ್ಕಂತಾಗಿದೆ. ವಿಚಾರಣೆಗೆ ನಟಿ ರಿಯಾ ಅವರ ಚಾರ್ಟರ್ಡ್ ಅಕೌಂಟೆಂಟ್ ನನ್ನೂ ಕರೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸುಶಾಂತ್ ಅಕೌಂಟ್ ನಿಂದ ರಿಯಾ 15 ಕೋಟಿ ವರ್ಗಾವಣೆ ಮಾಡಿಕೊಂಡಿರುವ ಆರೋಪವಿದ್ದು, ಇದರ ಹೊರತಾಗಿ ಸುಶಾಂತ್ ತಂದೆ ಕೆಕೆ ಸಿಂಗ್ ಅವರು ಪಟ್ನಾ ಠಾಣೆಯಲ್ಲಿ ರಿಯಾ ಹಾಗೂ ಕುಟುಂಬಸ್ಥರ ವಿರುದ್ಧ ಕೊಲೆ, ಮೋಸ, ಮಾನಸಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ರು. ಅದಾಗಿದ್ದೇ ತಡ ರಿಯಾ ತಮ್ಮ ಮುಂಬೈನ ನಿವಾಸದಿಂದ ಎಸ್ಕೇಪ್ ಆಗಿದ್ರು. ಅಲ್ದೇ ಮುಂಬೈ ಪೊಲೀಸರಿಗೆ ಕೇಸ್ ವರ್ಗಾಯಿಸುವಂತೆ ತಮ್ಮ ವಕೀಲರ ಮುಖಾಂತರ ಸುಪ್ರೀಂ ಕೋರ್ಟ್ ಗೆ ರಿಯಾ ಅರ್ಜಿ ಸಲ್ಲಿಸಿದ್ದು, ಸದ್ಯ ಎಲ್ಲರ ಅನುಮಾನ ರಿಯಾ ಮೇಲೇ ಇದೆ. ರಿಯಾ ಪರಾರಿಯಾಗಿರುವುದರಿಂದ ನೆಟ್ಟಿಗರ ಅನುಮಾನ ಇನ್ನಷ್ಟು ಬಲವಾಗಿದ್ದು, ಆಕೆಯ ಬಂಧನಕ್ಕೆ ಟ್ರೆಂಡ್ ಶುರುವಾಗಿದೆ. ಇದರ ಹೊರತಾಗಿ ಸುಶಾಂತ್ ಅವರನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಲುವಾಗಿ ರಿಯಾ ಮಾಠ ಮಂತ್ರದ ಹೊರೆ ಹೋಗಿದ್ರು ಎಂಬ ಸುದ್ದಿಯೂ ದೇಶಾದ್ಯಂತ ಸಂಚಲನ ಮುಡಿಸಿದ್ದು, ಈ ಎಲ್ಲಾ ವಿಚಾರಗಳಿಂದಾಗಿ ರಿಯಾ ಸದ್ಯಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.








