IPL 2022 | ಕುಲ್ ದೀಪ್ ಯಾದವ್ ಅತ್ಯದ್ಭುತ ಸ್ಪಿನ್ನರ್
ದೆಹಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಕುಲದೀಪ್ ಯಾದವ್ ಐಪಿಎಲ್-2022 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಈ ಋತುವಿನಲ್ಲಿ ಇದುವರೆಗೆ ಐದು ಪಂದ್ಯಗಳನ್ನು ಆಡಿರುವ ಕುಲ್ದೀಪ್ ಯಾದವ್ 11 ವಿಕೆಟ್ ಪಡೆದಿದ್ದಾರೆ.
ಇದುವರೆಗಿನ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
ಇದೇ ವೇಳೆ.. ಕಳೆದ ಕೆಲವು ಸೀಸನ್ಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ಕುಲದೀಪ್ ಯಾದವ್ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ.
ಹೀಗಾಗಿ ಕೆಕೆಆರ್ ತಂಡ ಅವರನ್ನು ರಿಟೇನ್ ಮಾಡಿಕೊಂಡಿರಲಿಲ್ಲ.
ಇತ್ತ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕುಲ್ ದೀಪ್ ಯಾದವ್ ಅವರಿಗೆ 2 ಕೋಟಿ ನೀಡಿ ಖರೀದಿ ಮಾಡಿದೆ. ಸದ್ಯ ಅವರು ಡೆಲ್ಲಿ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಮಾತನಾಡಿ, ಕೆಕೆಆರ್ ಅತ್ಯುತ್ತಮ ಸ್ಪಿನ್ನರ್ಗಳನ್ನು ಹೊಂದಿತ್ತು.
ಹೀಗಾಗಿಯೇ ಕಳೆದ ಎರಡು ಸೀಸನ್ಗಳಲ್ಲಿ ಕುಲದೀಪ್ಗೆ ಅವಕಾಶ ಸಿಕ್ಕಿರಲಿಲ್ಲ. ಮೆಗಾ ಹರಾಜಿನಲ್ಲಿ ಕುಲ್ ದೀಪ್ ಅವರನ್ನು ಖರೀದಿಸಲು ನಾವು ಮೊದಲೇ ಪ್ಲಾನ್ ಮಾಡಿಕೊಂಡಿದ್ದೇವು.
ಕುಲದೀಪ್ ಅದ್ಭುತ ಸ್ಪಿನ್ನರ್, ಆದ್ರೆ ಅವರಿಗೆ ಕೆಕೆಆರ್ ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ಹೀಗಾಗಿಯೇ ಅವರು ಈ ಹಿಂದೆ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು ಎಂದು ರಿಕಿ ಅಭಿಪ್ರಾಯಪಟ್ಟಿದ್ದಾರೆ.
ricky-ponting-feels-kuldeep-yadav-was-unable-to-get-many-opportunities-with-kkr









