ಕನ್ನಡದಲ್ಲಿ ಕಳೆದೆರೆಡು ವಾರಗಳಲ್ಲಿ ಕೆಲ ಸಿನಿಮಾಗಳು ರಿಲೀಸ್ ಆಗಿವೆ.. ಈ ಸಿನಿಮಾಗಳು ಒಂದೆಡೆ ಡಬ್ಬಿಂಗ್ ಸಿನಿಮಾಗಳ ಹಾವಳಿಯಿಂದ ತೊಂದರೆ ಅನುಭವಿಸಿದ್ರೆ , ಇತ್ತ ಪೈರೆಸಿಯಾಗಿ ಸಮಸ್ಯೆ ಎದುರಿಸಿವೆ.. ಅಂತೆಯೇ ಡಿಸೆಂಬರ್ 24 ಕ್ಕೆ ರಿಲೀಸ್ ಆಗಿದ್ದ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ಕೂಡ ಪೈರೆಸಿಗೆ ತುತ್ತಾಗಿದೆ.
ಇದೀಗ ರೈಡರ್ ಸಿನಿಮಾ ಪೈರಸಿ ಆದ ಹಿನ್ನೆಲೆಯಲ್ಲಿ ನಿರ್ಮಾಪಕ ಲಹರಿ ವೇಲು ಅವರು ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅಭಿನಯದ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ತಮಿಳು ಬ್ಲಾಸ್ಟರ್ಸ್ನಿಂದ ಪೈರಸಿಯಾಗಿದೆ. ಕಿಡಿಗೇಡಿಗಳ ವಿರುದ್ಧ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದೆ.
ಅಲ್ದೇ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಪೈರೆಸಿ ಬಗ್ಗೆ ಬೇಸರ ವ್ಯಕ್ತಪಡಿಸಿ , ದಯಮಾಡಿ ಪೈರೆಸಿ ಕಾಪಿಗಳನ್ನ ವೀಕ್ಷಿಸಬೇಡಿ , ಥಿಯೇಟರ್ ಗಳಲ್ಲೇ ಸಿನಿಮಾ ವೀಕ್ಷಿಸಿ ಎಂದು ಮನವಿ ಮಾಡಿದ್ದರು..
ಡಾಲಿ ಧನಂಜಯ್ ಖುದ್ದು ನಿರ್ಮಿಸಿ ನಟಿಸಿರುವ ‘ಬಡವ ರಾಸ್ಕಲ್’ ಸಿನಿಮಾ ಲೀಕ್ ಆಗಿದೆ.. ಥಿಯೇಟರ್ ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿರುವ ‘ಬಡವ ರಾಸ್ಕಲ್, ನ ಮೇಲೂ ಪೈರೆಸಿ ಕರಿನೆರಳು ಬಿದ್ದಿದೆ..








