ಹೊಸದಿಲ್ಲಿ, ಜೂನ್ 5: ಇಂದು ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ ಕಂಡಿದೆ. ಸೆನ್ಸೆಕ್ಸ್ 306.54 ಪಾಯಿಂಟ್ ಗಳ ಏರಿಕೆ ಕಂಡು, ದಿನಾಂತ್ಯಕ್ಕೆ 34,287.24 ಪಾಯಿಂಟ್ ಗಳಿಗೆ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 113.05 ಪಾಯಿಂಟ್ ಗಳ ಏರಿಕೆ ಕಂಡು, ದಿನದ ಅಂತ್ಯಕ್ಕೆ 10,142.15 ಪಾಯಿಂಟ್ ಗೆ ವಹಿವಾಟು ಮುಗಿಸಿದೆ.
ಪಿಎಸ್ ಯು ಬ್ಯಾಂಕ್ ಸೂಚ್ಯಂಕವು 7 ಪರ್ಸೆಂಟ್ ಏರಿಕೆ ಕಂಡಿದರೆ, ಲೋಹ, ವಾಹನ, ಮೂಲಸೌಕರ್ಯ ವಲಯದ ಷೇರುಗಳು ಹೆಚ್ಚಳ ಕಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಲಿತಾಂಶ ಅತ್ಯುತ್ತಮವಾಗಿರುವುದರ ಹಿನ್ನೆಲೆಯಲ್ಲಿ ಆ ಷೇರುಗಳು ಭಾರೀ ಏರಿಕೆ ಕಂಡಿದ್ದರೆ, ರಿಲಯನ್ಸ್ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಮುಬಾದಲ ಕಂಪೆನಿಯು ಹೂಡಿಕೆ ಮಾಡುವ ಸುದ್ದಿ ಹೊಸ ಉತ್ಸಾಹ ಮೂಡಿಸಿದೆ.
ಎಫ್ ಎಂಸಿಜಿ ಹೊರತುಪಡಿಸಿ, ಉಳಿದ ಸೂಚ್ಯಂಕಗಳು ಏರಿಕೆ ದಾಖಲಿಸಿದೆ.
ನಿಫ್ಟಿ ಸೂಚ್ಯಂಕದಲ್ಲಿ ಏರಿಕೆ ಕಂಡ ಷೇರುಗಳು
ಟಾಟಾ ಮೋಟಾರ್ಸ್
ಭಾರ್ತಿ ಇನ್ ಫ್ರಾಟೆಲ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಟಾಟಾ ಸ್ಟೀಲ್
ಹಿಂಡಾಲ್ಕೋ
ನಿಫ್ಟಿ ಸೂಚ್ಯಂಕದಲ್ಲಿ ನಷ್ಟ ಕಂಡ ಷೇರುಗಳು
ಟಿಸಿಎಸ್
ಹಿಂದೂಸ್ತಾನ್ ಯುನಿಲಿವರ್
ಸಿಪ್ಲಾ
ಬಜಾಜ್ ಆಟೋ
ಇನ್ಫೋಸಿಸ್








