ಚೀನಾ ದೇಶದ ಬಹುತೇಕ ಭಾಗದ ಜನ ಕೊರೊನಾ ವೈರಸ್ ದಾಳಿಗೆ ತತ್ತರಿಸಿ ಹೋಗಿದ್ದಾರೆ. ದಿನ ಕಳೆದಂತೆ ವೈರಸ್ ಗಾಳಿಗಿಂತ ವೇಗವಾಗಿ ಹರಡುತ್ತಿದೆ. ಇವತ್ತು ಒಂದೇ ದಿನ 2,009 ಮಂದಿಯ ದೇಹದಲ್ಲಿ ವೈರಸ್ ಕಾಣಿಸಿಕೊಂಡಿದೆ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಈಗಾಗಲೇ 1,800 ಕ್ಕೂ ಅಧಿಕ ಮಂದಿಯನ್ನು ವೈರಸ್ ಬಲಿ ಪಡೆದಿದೆ. ಅಲ್ಲದೆ 80 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ತಗಲಿರುವ ಪ್ರಕರಣಗಳು ದಾಖಲಾಗಿದೆ. ಈ ಪೈಕಿ ವೈರಸ್ ನ ಉಗಮ ಸ್ಥಾನ ಎನ್ನಲಾದ ಚೀನಾದ ಹುಬೈ ನಗರ ಒಂದರಲ್ಲೇ 15 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿದೆ. ಹಲವಾರು ನಾಪತ್ತೆಯಾಗಿದ್ದಾರೆ. ಅಂಕಿ-ಅಂಶಗಳ ಪ್ರಕಾರ ಭಾನುವಾರ ಒಂದೇ ದಿನದಲ್ಲಿ ಚೀನಾದಲ್ಲಿ ಕೊರೊನಾ ವೈರಸ್ ಗೆ 200 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಹುಬೈ ನಗರದಲ್ಲೇ 139 ಮಂದಿ ಮೃತಪಟ್ಟಿದ್ದಾರೆಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ(WHO)ಯು ಸ್ಪಷ್ಟನೆ ನೀಡಿದೆ. ಕೊರೊನಾ ವೈರಸ್ ನಿಂದ ಚೀನಾದ ಹುಬೈ ನಗರದಲ್ಲಿ ಸಾವಿನ ಸಂಖ್ಯೆಯ ನಾಗಾಲೋಟ ಮುಂದುವರಿಸಿದ್ದು, ಇದುವರೆಗೂ 1,843 ಮಂದಿ ಹುಬೈ ನಗರದಲ್ಲೇ ಪ್ರಾಣ ಬಿಟ್ಟಿದ್ದಾರೆ, 56,249 ಜನರಲ್ಲಿ ಮಾರಕ ಸೋಂಕು ತಗಲಿರುವುದು ಸ್ಪಷ್ಟವಾಗಿದೆ. ಪೆಬ್ರವರಿ ತಿಂಗಳ ಅಂತ್ಯಕ್ಕೆ ವೈರಸ್ ತನ್ನ ಕರಾಳ ರೂಪವನ್ನು ತೋರಲಿದ್ದು ಲಕ್ಷಾಂತರ ಜನ ಬಲಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕಂತೂ ವೈರಸ್ ನ ವೇಗವನ್ನು ತಡೆಯುವ ಯಾವುದೇ ಪ್ರಯತ್ನಗಳು ಫಲಕಾರಿಯಾದಂತೆ ಕಾಣುತ್ತಿಲ್ಲ. ಚಿಕಿತ್ಸೆ ನೀಡಲು ಬಂದ ವೈದ್ಯಕೀಯ ಸಿಬ್ಬಂದಿಯೂ ಸಹ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ. ಒಟ್ಟಿನಲ್ಲಿ ಚೀನಾದ ಬಹುತೇಕ ನಗರಗಳ ಪರಿಸ್ಥಿತಿಯಂತೂ ICU ನಲ್ಲಿರುವ ರೋಗಿಗಿಂತ ಕಡೆಯಾಗಿದೆ.
ಸ್ಯಾಂಡಲ್ ವುಡ್ ನ ಸಕ್ಸಸ್ ಹಿಂದೆ ಕೆಜಿಎಫ್ ಸ್ಟಾರ್: ಶಿವ ಕಾರ್ತಿಕೇಯನ್
ನಟ ಯಶ್ ಮತ್ತು ಅವರ ಸಿನಿಮಾಗಳಾದ ಕೆಜಿಎಫ್ ಸರಣಿಯು ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಮುಖ್ಯಭೂಮಿಕೆಯನ್ನು ನಿರ್ವಹಿಸಿದೆ. ಈ ಬಗ್ಗೆ ತಮಿಳು ನಟ ಶಿವಕಾರ್ತಿಕೇಯನ್ ಪ್ರಸ್ತಾಪಿಸಿದ್ದು,...