ರಿಷಬ್ ಮತ್ತು ಚೇತೇಶ್ವರ ಪೂಜಾರ ಟೆಸ್ಟ್ ಕ್ರಿಕೆಟ್ ನ ವಿಭಿನ್ನ ರೂಪ – ಸಚಿನ್ ತೆಂಡುಲ್ಕರ್
ರಿಷಬ್ ಪಂತ್ ಬ್ಯಾಟಿಂಗ್ ಶೈಲಿಯನ್ನು ನಾನು ಯಾವಾಗಲೂ ಆನಂದಿಸುತ್ತೇನೆ. ಆತ ವಿಭಿನ್ನ ಆಟಗಾರ. ರಿಷಬ್ ಪಂತ್ ಚೆಂಡನ್ನು ಹೊಡೆಯುವ ರೀತಿ ಕೂಡ ಭಿನ್ನವಾಗಿರುತ್ತದೆ. ತಂಡದಲ್ಲಿ ಇಂತಹ ಆಟಗಾರರು ಇರಬೇಕು ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ರಿಷಬ್ ಪಂತ್ ಅವರನ್ನು ಚೇತೇಶ್ವರ ಪೂಜಾರ ಜೊತೆ ಹೋಲಿಸುತ್ತೇನೆ. ಇವರಿಬ್ಬರ ಆಟದ ಬಗ್ಗೆ ಹೇಳುವುದಾದ್ರೆ ರಿಷಬ್ ಆಕ್ರಮಣಕಾರಿ ಪ್ರವೃತ್ತಿಯ ಆಟಗಾರ. ಪೂಜಾರ ತಾಳ್ಮೆಯ ಆಟಗಾರ. ಜೊತೆಗೆ ತಂಡಕ್ಕೆ ಬೆನ್ನುಲುಬಾಗಿ ನಿಲ್ಲುವಂತಹ ಆಟಗಾರ. ಹೀಗಾಗಿ ತಂಡಕ್ಕೆ ಆಧಾರವಾಗಿರುತ್ತಾರೆ ಎಂದು ಸಚಿನ್ ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಪೂಜಾರ ರನ್ ಗಳಿಸುತ್ತಿರುವ ರೀತಿ ಮತ್ತು ಔಟಾಗುವ ರೀತಿಯನ್ನು ರಿಷಬ್ ಪಂತ್ ಗೆ ಹೋಲಿಸಿದ್ರೆ ಅದು ಕೂಡ ಭಿನ್ನವಾಗಿರುತ್ತದೆ ಎಂಬುದು ಸಚಿನ್ ತೆಂಡುಲ್ಕರ್ ಅವರ ಅಭಿಮತವಾಗಿದೆ.
ಇನ್ನು ರಿಷಬ್ ಪಂತ್ ಮತ್ತು ಪೂಜಾರ ಅವರನ್ನು ಅರ್ಥ ಮಾಡಿಕೊಂಡ್ರೆ ಅವರಿಬ್ಬರ ಆಟವನ್ನು ನಾವು ಮೆಚ್ಚಿಕೊಳ್ಳುತ್ತೇವೆ. ಏಕೆಂದ್ರೆ ಟೀಮ್ ಇಂಡಿಯಾಗೆ ರಿಷಬ್ ಪಂತ್ ಬ್ಯಾಟಿಂಗ್ ಎಷ್ಟು ಮುಖ್ಯನೋ ಪೂಜಾರ ಅವರ ಬ್ಯಾಟಿಂಗ್ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇವರಿಬ್ಬರು ಕೂಡ ತಂಡಕ್ಕೆ ಬೆನ್ನಲುಬಾಗಿರುತ್ತಾರೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ಇನ್ನು ಚೇತಶ್ವರ ಪೂಜಾರ ಅವರ ಬ್ಯಾಟಿಂಗ್ ಬಗ್ಗೆ ಮಾತನಾಡಿದ ತೆಂಡುಲ್ಕರ್, ಟೆಸ್ಟ್ ಕ್ರಿಕೆಟ್ ಅನ್ನು ಹೇಗೆ ಆಡಬೇಕು ಎಂಬುದಕ್ಕೆ ಪೂಜಾರ ಅತ್ಯುತ್ತಮ ಉದಾಹರಣೆ. ಹಾಗೇ ರಿಷಬ್ ಪಂತ್ ಕೂಡ. ನೈಜ ಹೊಡೆತಗಳ ಮೂಲಕ ಗಮನ ಸೆಳೆಯುತ್ತಾರೆ. ಅವರ ಪ್ರತಿಭೆ ಮತ್ತು ಸಾಮಥ್ರ್ಯದ ಬಗ್ಗೆ ನನಗೆ ನಂಬಿಕೆ ಇದೆ ಎಂದು ಸಚಿನ್ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಹೇಳುವುದಾದ್ರೆ ರಿಷಬ್ ಪಂತ್ ಮತ್ತು ಚೇತೇಶ್ವರ ಪೂಜಾರ ಟೆಸ್ಟ್ ಕ್ರಿಕೆಟ್ ಕೂಡ ವಿಭಿನ್ನ ರೂಪ. ಪೂಜಾರ ಟೆಸ್ಟ್ ಕ್ರಿಕೆಟ್ ಏನು ಎಂಬುದನ್ನು ಪೂಜಾರ ಬ್ಯಾಟಿಂಗ್ ನಲ್ಲಿ ನೋಡಬಹುದು. ಅದೇ ರೀತಿ ಟೆಸ್ಟ್ ಕ್ರಿಕೆಟ್ ನ ಇನ್ನೊಂದು ರೂಪವನ್ನು ರಿಷಬ್ ಪಂತ್ ನಲ್ಲಿ ನೋಡಬಹುದಾಗಿದೆ ಎಂದು ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.