Rishab Shetty : ಹೆಣ್ಣು ಮಗಳಿಗೆ ತಂದೆಯಾದ ರಿಷಬ್ ಶೆಟ್ಟಿ…!!!
ಸ್ಯಾಂಡಲ್ ವುಡ್ ನಟ , ನಿರ್ದೇಶಕರಾ ರಿಷಬ್ ಶೆಟ್ಟಿ ಹಾಗೂ ಪ್ರಗತಿ ದಂಪತಿ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ಧಾರೆ.. 2ನೇ ಮಗುವಿಗೆ ತಂದೆ ತಾಯಿಯಾದ ಖುಷಿಯಲ್ಲಿ ರಿಷಬ್ ದಂಪತಿ ಇದೆ.. ಈ ವಿಚಾರವನ್ನ ರಿಷಬ್ ಶೆಟ್ಟಿ ಅವರು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದು , ಅಭಿಮಾನಿಗಳು ಶುಭಾಷಯಗಳನ್ನ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಟ್ವಿಟ್ಟರ್ ನಲ್ಲಿ ಪತ್ನಿಯೊಂದಿಗಿನ ಫೋಟೊ ಹಂಚಿಕೊಂಡಿರುವ ರಿಷಬ್ ಶೆಟ್ಟಿ ಅವರು , ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.. 2019 ಏಪ್ರಿಲ್ 7 ರಂದು ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಅವರು ಮೊದಲ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗನಿಗೆ ರಣ್ವಿತ್ ಶೆಟ್ಟಿ ಎಂದು ಹೆಸರಿಟ್ಟಿದ್ದರು. ಇದೀಗ ಈ ಕುಟುಂಬ 2ನೇ ಸದಸ್ಯನ ಆಗಮನವಾದ ಸಂತಸದಲ್ಲಿದೆ..
ರಿಷಬ್ ಶೆಟ್ಟಿ ಎರಡನೇ ಬಾರಿ ತಂದೆಯಾಗುತ್ತಿರುವ ಖುಷಿಯ ವಿಷಯವನ್ನು ಹೊಸ ವರ್ಷದಂದೇ ಟ್ವಿಟರ್ನಲ್ಲಿ ಶೇರ್ ಮಾಡಿದ್ದರು. ತುಂಬು ಗರ್ಭಿಣಿಯಾಗಿದ್ದ ಪತ್ನಿಯ ಫೋಟೊಶೂಟ್ ಮಾಡಿಸಿದ್ದರು. ಪತ್ನಿ ಪ್ರಗತಿ ಶೆಟ್ಟಿ ಹಾಗೂ ಪುತ್ರ ರಣ್ವಿತ್ ಶೆಟ್ಟಿಯೊಂದಿಗೆ ಫೋಟೋಗೆ ಫೋಸ್ ಕೊಟ್ಟಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.