ಕಂಬಳದ ಕೋಣ ಓಡಿಸಲು ಶೆಟ್ರ ಪರಿಶ್ರಮ – ಕಾಂತಾರ ಮೇಕಿಂಗ್ ವಿಡಿಯೋ…
ಟೀಸರ್. ಟ್ರೈಲರ್, ಹಾಡುಗಳು ಮೂಲಕ ಭಾರಿ ನಿರೀಕ್ಷೆ ಹುಟ್ಟಿಸಿರುವ ಕಾಂತಾರ ಚಿತ್ರ ಬಿಡುಗಡೆಗೆ ಭರ್ಜರಿ ಸಿದ್ದತೆ ನಡೆಸಿದೆ. ಸಿನಿಮಾ ತಂಡ ಕೂಡ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಚಿತ್ರ ಇದೇ ತಿಂಗಳು 30 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ ಚಿತ್ರದ ಮೇಕಿಂಗ್ ವಿಡಿಯೋವನ್ನ ಇಂದು ಬಿಡುಗಡೆ ಮಾಡಲಾಗಿದೆ ಈ ಮೂಲಕ ಚಿತ್ರದ ಕ್ರೇಜ್ ಹೆಚ್ಚಿಸಿದೆ. ಕಂಬಳದ ಜೊತೆ ಜೊತೆಗೆ ಕರಾವಳಿ ಶೈಲಿಯಲ್ಲಿ ಪಕ್ಕಾ ಮಾಸ್ ಆಕ್ಷನ್ ಕಥೆಯನ್ನ ಹೇಳುತ್ತಿದ್ದಾರೆ ರಿಷಬ್ ಶೆಟ್ಟಿ.
ಶೆಟ್ರು ಯಾವಾಗಲೂ ಒಳ್ಳೆ ಕಂಟೆಂಟ್ ಜೊತೆಗೆ ಬರ್ತಾರೆ ಅನ್ನೋದು ರಿಷಬ್ ಶೆಟ್ಟಿ ಫ್ಯಾನ್ಸ್ ಅಭಿಮತ ಅದಕ್ಕೆ ತಕ್ಕಂತೆ ಹೊಸದೇ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ನಿರ್ದೇಶಕರು ರೆಡಿಯಾಗಿದ್ದಾರೆ. ಈಗ ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೋ ಕೂಡ ಇಂಥದೇ ಅನುಭವವನ್ನ ಕೊಡುತ್ತದೆ. ಕೆಸರು ಗದ್ದೆಯಲ್ಲಿ ಕಂಬಳ ಓಡಿಸುವುದನ್ನ ಕಲಿತಿರುವ ಶೆಟ್ರ ಪರಿಶ್ರಮವನ್ನ ವಿಡಿಯೋ ತೋರಿಸುತ್ತದೆ.
ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ ಮೂಲಕ ವಿಜಯ್ ಕಿರಗಂದೂರು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಿಷಬ್ ಶೆಟ್ಟಿ ಜೊತೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮುಂತಾದವರು ‘ಕಾಂತಾರ’ ಚಿತ್ರದಲ್ಲಿ ನಟಿಸಿದ್ದಾರೆ.








