ಕೊರೊನಾದಿಂದಾಗಿ ವರ್ಕ್ ಫ್ರಮ್ ಹೋಂ ಹೆಚ್ಚು ಚಾಲ್ತಿಗೆ ಬಂದಿದೆ. ಜನರು ಮನೆಯಿಂದಲೇ ಕೆಲಸ ಮಾಡೋಣ ಅಂತಾ ವರ್ಕ್ ಫ್ರಮ್ ಹೋಮ್ ಮೊರೆ ಹೋಗಿದ್ದಾರೆ. ಹಾಗೇ ಚಿತ್ರೋದ್ಯಮವೂ ನಿಂತಿದ್ದು, ಸ್ಯಾಂಡಲ್ ವುಡ್ ಸಂಪೂರ್ಣ ಶೂಟಿಂಗ್ ನಿಲ್ಲಿಸಿದೆ. ಹಾಗಾಗಿ ನಟನಟಿರೆಲ್ಲಾ ಮನೆಯಲ್ಲಿದ್ದು, ರಿಷಬ್ ಶೆಟ್ಟಿ ತಮ್ಮ ವರ್ಕ್ ಫ್ರಮ್ ಹೋಮ್ ಹೇಗಿದೆ ಅಂತಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/B96-X-IFwaN/?utm_source=ig_web_copy_link
ತಮ್ಮ ಮಗ ರನ್ವಿತ್ ಶೆಟ್ಟಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸ್ತಿರೋ ಫೋಟೋ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ‘ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟಿದೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ! ಒಟ್ಟಾರೆ ಎಲ್ಲರ ತರ ನಮ್ದೂ ‘ವರ್ಕ್ ಫ್ರಂ ಹೋಂ’ ಜೋರಾಗ್ ನೆಡಿತಿದೆ ಎಂದು ಬರೆದುಕೊಂಡಿದ್ದಾರೆ.
https://twitter.com/rakshitshetty/status/1240653722989899776?ref_src=twsrc%5Etfw%7Ctwcamp%5Etweetembed%7Ctwterm%5E1240653722989899776&ref_url=https%3A%2F%2Fnewsfirstlive.com%2F2020%2F03%2F20%2Frishab-shetty-work-from-home-mode%2F
ಈ ಟ್ವೀಟ್ ಗೆ ರಕ್ಷಿತ್ ಶೆಟ್ಟಿ ಕೂಡ ಕವನದ ಮೂಲಕ ಪ್ರತಿಕ್ರಿಯಿಸಿದ್ದಾರೆ.
‘ನನ್ನ ಮುಗ್ಧತೆಯ ಅರಿವು ನನಗಿಲ್ಲ,
ನನ್ನ ಹೆತ್ತವನೊಮ್ಮೆ ನೋಡು,
ಅವನ ಮುಗ್ಧತೆಯಲ್ಲವೆ ನನಗೆಲ್ಲ’ ಎಂದು ಬರೆದುಕೊಂಡಿದ್ದಾರೆ.








