ಚಂದನವನದ ನಟ ರಿಷಬ್ ಶೆಟ್ಟಿ (Rishab Shetty) ‘ಕಾಂತಾರ ಚಾಪ್ಟರ್ 2’ರಲ್ಲಿ (Kantara Chapter 2) ಈಗ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ಅವರ ಹೆಸರು ಮತ್ತೊಂದು ಚಿತ್ರದೊಂದಿಗೆ ತಳಕು ಹಾಕಿಕೊಂಡಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅವರು ‘ಜೈ ಹನುಮಾನ್ ಪಾರ್ಟ್ 2’ನಲ್ಲಿ (Jai Hanuman Sequel)ನಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಅಭಿಮಾನಿಗಳನ್ನು ಚರ್ಚೆಗೆ ತಂದೊಡ್ಡಿದೆ. ಜೈ ಹನುಮಾನ್ ಸಿನಿಮಾದ ಸೀಕ್ವೆಲ್ ಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಚಿತ್ರದ ಪಾರ್ಟ್ 2ನಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಬೇಕೆಂದು ಚಿತ್ರ ತಂಡ ಕೋರಿದೆ ಎನ್ನಲಾಗುತ್ತಿದೆ.
ಆದರೆ, ಈ ಕುರಿತು ನಟ ರಿಷಬ್ ಶೆಟ್ಟಿ ಹಾಗೂ ಜೈ ಹನುಮಾನ್ ತಂಡ ಯಾವುದೇ ಮಾಹಿತಿ ಹೊರ ಹಾಕಿಲ್ಲ. ಇದು ಇಲ್ಲಿಯವರೆಗೂ ಕೇವಲ ಗಾಸಿಪ್ ಆಗಿದೆ. ವಿಷಯ ಬಹಿರಂಗವಾದ ಮೇಲೆಯೇ ಸತ್ಯ ಹೊರ ಬೀಳಲಿದೆ. 2024ರಲ್ಲಿ ತೆರೆಕಂಡ ‘ಜೈ ಹನುಮಾನ್’ ಚಿತ್ರದಲ್ಲಿ ತೇಜ ಸಜ್ಜಾ ಮತ್ತು ಅಮೃತಾ ಅಯ್ಯರ್ ನಟಿಸಿದ್ದರು. ಪ್ರಶಾಂತ್ ವರ್ಮಾ ನಿರ್ದೇಶಿಸಿದ್ದರು.