ರಹಾನೆ ಬಿಟ್ಟು ಪಂತ್ ಗೆ ಡೆಲ್ಲಿ ಮಣೆ ಹಾಕಿದ್ದು ಸರಿನಾ..?
ಟೀಂ ಇಂಡಿಯಾದ ಯಂಗ್ ಗನ್ ರಿಷಬ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ. ಶ್ರೇಯಸ್ ಅಯ್ಯರ್ ಗೆ ಗಾಯದ ಸಮಸ್ಯೆ ಕಾರಣ ಈ ಬಾರಿ ಐಪಿಎಲ್ ನಲ್ಲಿ ಆಡುತ್ತಿಲ್ಲ. ಈ ಹಿನ್ನೆಲೆ ತಂಡದ ಉಪನಾಯಕನಾಗಿದ್ದ ಪಂತ್ ಅವರನ್ನ ಟೀಂ ಮ್ಯಾನೆಜ್ ಮೆಂಟ್ ನಾಯಕನಾಗಿ ನೇಮಕ ಮಾಡಿದೆ.
ರಹಾನೆ ಬಿಟ್ಟು ಪಂತ್ ಗೆ ಡೆಲ್ಲಿ ಮಣೆ ಹಾಕಿದ್ದು ಸರಿನಾ..?
ಅಯ್ಯರ್ ಈ ಬಾರಿಯ ಐಪಿಎಲ್ ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಯುತ್ತಿದ್ದಂತೆ ಡೆಲ್ಲಿ ಅಭಿಮಾನಿಗಳು ನಾಯಕನ ಬಗ್ಗೆ ತಲೆ ಕಡೆಸಿಕೊಂಡಿದ್ದರು. ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳು ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಡೆಲ್ಲಿಯನ್ನ ಮುನ್ನಡೆಸೋದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು.
ಯಾಕೆಂದ್ರೆ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಯಂಗ್ ಟೆಸ್ಟ್ ತಂಡವನ್ನ ಅತ್ಯದ್ಭುತವಾಗಿ ಮುನ್ನಡೆಸಿದ್ದರು. ಕೇವಲ ಹೊಸ ಮುಖಗಳನ್ನೇ ಇಟ್ಟುಕೊಂಡು ಆಸೀಸ್ ನೆಲದಲ್ಲಿ ಕಾಂಗರೂಗಳನ್ನ ಬಗ್ಗುಬಡಿಯುವಲ್ಲಿ ರಹಾನೆ ಯಶಸ್ವಿಯಾಗಿದ್ದರು. ಟೆಸ್ಟ್ ಸರಣಿಯಲ್ಲಿ ಅವರ ನಾಯಕತ್ವದ ಗುಣಗಳನ್ನ ನೋಡಿದ ಕ್ರಿಕೆಟ್ ಜಗತ್ತು ಮುಕ್ತಕಂಠದಿಂದ ಹಾಡಿಹೊಗಳಿತ್ತು. ಇದೇ ಕಾರಣಕ್ಕಾಗಿ ರಹಾನೆ ಡೆಲ್ಲಿ ತಂಡದ ನಾಯಕರಾಗಬೇಕು ಮತ್ತು ಅವರೇ ನಾಯಕರಾಗುತ್ತಾರೆ ಎಂದು ಅಂದುಕೊಂಡಿದ್ದರು. ಆದ್ರೆ ಡೆಲ್ಲಿ ತಂಡದ ಮಾಲೀಕರು ಪಂತ್ ಗೆ ಮಣೆ ಹಾಕಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.








