ರಿಷಬ್ ಪಂತ್ ಸಿಡಿಲಬ್ಬರ ಬ್ಯಾಟಿಂಗ್ ಅಂತ್ಯ
ಪರ್ಲ್ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ರಿಷಬ್ ಬಂತ್ ಆಟ 85 ರನ್ ಗಳಿಗೆ ಅಂತ್ಯವಾಗಿದೆ.
ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಗಳನ್ನು ಕಳೆದುಕೊಂಡಾಗ ಕ್ರೀಸ್ ಗೆ ಬಂದ ರಿಷಬ್ ಪಂತ್, ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಬೆಂಡೆತ್ತಿದರು.
ಎಂದಿನಂತೆ ತಮ್ಮ ಬ್ಯಾಟಿಂಗ್ ಶೈಲಿಯನ್ನು ಮುಂದುವರೆಸಿದ ರಿಷಬ್ ಪಂತ್, ಕೇವಲ 43 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಇದೇ ವೇಳೆ ನಾಯಕ ಕೆ.ಎಲ್.ರಾಹುಲ್ ಕೂಡ ಅರ್ಧ ಶತಕ ಗಳಿಸಿದರು.
ಆದ್ರೆ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಿಷಬ್ ಪಂತ್ 85 ರನ್ ಗಳಿಸಿದ್ದಾಗ ಶಮ್ಶಿ ಬೌಲಿಂಗ್ ನಲ್ಲಿ ಮಾರ್ಕ್ರಂಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂತ್ ಈ ಇನ್ನಿಂಗ್ಸ್ ನಲ್ಲಿ 71 ಎಸೆತಗಳನ್ನು ಎದುರಿಸಿ 10 ಬೌಂಡರಿ, 2 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ಇತ್ತ ಕೆ.ಎಲ್.ರಾಹುಲ್ 79 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 55 ರನ್ ಗಳಿಸಿ ಮಗಲಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನುಳಿದಂತೆ ಶಿಖರ್ ಧವನ್ 29 ರನ್, ಶ್ರೇಯಸ್ ಅಯ್ಯರ್ 11 ರನ್ , ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಸದ್ಯ ಟೀಂ ಇಂಡಿಯಾ 37 ಓವರ್ ಗಳಿಗೆ ಐದು ವಿಕೆಟ್ ಕಳೆದುಕೊಂಡು 207 ರನ್ ಗಳಿಸಿದೆ.