ಅಭ್ಯಾಸ ಪಂದ್ಯದಿಂದ ರಿಷಭ್ ಪಂತ್ ಔಟ್.. ಕೆ.ಎಲ್.ರಾಹುಲ್ ಇನ್
ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೌಂಟಿ ಇಲೆವೆನ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ರಿಷಬ್ ಪಂತ್ ಆಡುತ್ತಿಲ್ಲ. ಈ ಸ್ಥಾನಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಮುಕ್ತಾಯದ ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಂಗ್ಲರ ನಾಡಿನಲ್ಲಿ ಉಳಿದಿದೆ.
ಈ ಮಧ್ಯೆ ಟೀಂ ಇಂಡಿಯಾದ ಯಂಗ್ ಫೈರ್ ಎಂದೇ ಖ್ಯಾತಿಯಾಗಿರುವ ರಿಷಭ್ ಪಂತ್‍ಗೆ ಕೋವಿಡ್ ಸೋಂಕು ತಗುಲಿದೆ.
ಇದೇ ಕಾರಣದಿಂದಾಗಿ ಪಂತ್ ಕೌಂಟಿ ಇಲೆವೆನ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಅಲ್ಲದೆ ವೃದ್ಧಿಮಾನ್ ಸಹಾ ಕ್ವಾರಂಟೈನ್ ನಲ್ಲಿರುವುದರಿಂದ ವಿಕೆಟ್ ಕೀಪರ್ ಜವಾಬ್ದಾರಿ ಕನ್ನಡಿಗ ರಾಹುಲ್ ಹೆಗಲಿಗೆ ಬಿದ್ದಿದೆ.
ಇನ್ನು ಕೆ.ಎಲ್.ರಾಹುಲ್ 2019ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯ ನಂತರ ಭಾರತದ ಟೆಸ್ಟ್ ತಂಡದ ಆಡುವ ಹನ್ನೋಂದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.
ಆದರೆ, ಈಗ ಜುಲೈ 20 ರಿಂದ 22ರವರೆಗೂ ನಡೆಯುವ ಕೌಂಟಿ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದು, ತಂಡಕ್ಕೆ ಮತ್ತೆ ಕಮ್ ಬ್ಯಾಕ್ ಮಾಡುವ ಉತ್ಸಾಹದಲ್ಲಿದ್ದಾರೆ.