Rishi Sunak : ಸೀಟ್ ಬೆಲ್ಟ್ ಧರಿಸದಿದ್ದಕ್ಕೆ ಪ್ರಧಾನಿಗೆ ದಂಡ ವಿಧಿಸಿದ ಬ್ರಿಟೀಷ್ ಪೊಲೀಸರು..
ಚಲಿಸುತ್ತಿರು ಕಾರಿನಲ್ಲಿ ಸೀಟ್ ಬೆಲ್ಟ್ ಧಿರಿಸದ ಕಾರಣಕ್ಕೆ ಬ್ರಿಟಿಷ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರಿಗೆ ದಂಡ ವಿಧಿಸಲಾಗಿದೆ. ಲಂಕಾಶೈರ್ ಪೊಲೀಸರು ಸೀಟ್ ಬೆಲ್ಟ್ ಧರಿಸಿದಿದ್ದಕ್ಕಾಗಿ 100 ಪೌಂಡ್ ಗಳ ದಂಡವನ್ನ ವಿಧಿಸಿ ಪೆನಾಲ್ಟಿ ನೋಟೀಸ್ ಜಾರಿ ಮಾಡಿರುವುದಾಗಿ ಧೃಡಪಡಿಸಿದ್ದಾರೆ.
ಗುರುವಾರ ಬ್ರಿಟೀಷ್ ಪ್ರಧಾನಿ ರಿಷಿ ಸುನಕ್ ವಾಯುವ್ಯ ಇಂಗ್ಲೆಂಡ್ನಲ್ಲಿ ಚಾಲನೆ ಮಾಡುವಾಗ ವೀಡಿಯೊ ಚಿತ್ರೀಕರಿಸುವುದಕ್ಕಾಗಿ ಸೀಟ್ ಬೆಲ್ಟ್ ತೆಗೆದಿದ್ದರು. ಇದಕ್ಕಾಗಿ ಸುನಕ್ ಕ್ಷಮೆಯಾಚಿಸಿದ್ದಾರೆ.
ಇದೊಂದು ಚಿಕ್ಕ ದೋಷವಾಗಿದೆ . ಸಣ್ಣ ವಿಡಿಯೋ ಕ್ಲಿಪ್ ಗಾಗಿ ಪ್ರಧಾನಿಯವರು ಸೀಟ್ ಬೆಲ್ಟ್ ತೆಗೆದಿದ್ದರು. ತಪ್ಪಾಗಿದೆ ಎಂದು ಅವರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಅದರ ಬಗ್ಗೆ ಕ್ಷಮೆಯಾಚಿಸಿದ್ದಾರೆ ಎಂದು ರಿಷಿ ಸುನಕ್ ಅವರ ವಕ್ತಾರರು ತಿಳಿಸಿದ್ದಾರೆ.
ಇಂಗ್ಲೆಂಡ್ನಲ್ಲಿ, 14 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರಯಾಣಿಕರು ಕಾರ್ಗಳು, ವ್ಯಾನ್ಗಳು ಮತ್ತು ಇತರ ಸರಕುಗಳ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸುವುದನ್ನ ಕಡ್ಡಾಯಗೊಳಿಸಲಾಗಿದೆ.
Rishi Sunak : British police fined Prime Minister for not wearing seat belt..