Rishi Sunak- ಬ್ರಿಟನ್ ಪಪ್ರಧಾನಿಯಾಗಿ ಪ್ರಮಾಣವಚನ ಸ್ವಿಕರಿಸಲಿರುವ ಕರ್ನಾಟಕದ ಅಳಿಯ ರಿಷಿ ಸುನಕ್ ಅವರು
ಇಂದು ಸಂಜೆ ಕಿಂಗ್ ಚಾರ್ಲ್ಸ್ ಅವರನ್ನು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಭೇಟಿಯಾಗಲಿದ್ದರೆ.ಈ ಸಂದರ್ಭದಲ್ಲಿ ರಿಷಿ ಸುನಕ್ ಅವರನ್ನು ನೂತನ ಬ್ರಿಟನ್ನ ಪ್ರಧಾನಿಯಾಗಿ ಘೊಷೀಸಲಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆಯಾದ ರಿಷಿ ಸುನಕ್ ಅವರು ಇಂದು ಮಹಾರಾಜ ಚಾರ್ಲ್ಸ್ III ಅವರನ್ನು ಭೇಟಿಯಾಗಿ ದೇಶದ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿ ಅಧಿಕಾರ ಸ್ವಿಕರಿಸಲಿದ್ದಾರೆ.
ನಿಕಟ ಪೂರ್ವ ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರು ಇಂದು ಬೆಳಿಗ್ಗೆ 10 ಕ್ಕೆ ಡೌನಿಂಗ್ ಸ್ಟ್ರೀಟ್ನಲ್ಲಿ ತಮ್ಮ ಕೊನೆಯ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ, ನಂತರ ಅವರು 73 ವರ್ಷದ ಮಹಾರಾಜರಿಗೆ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಅಧಿಕೃತ ರಾಜೀನಾಮೆ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ಮಾಜಿ ಚಾನ್ಸೆಲರ್ ಸುನಕ್ ಅವರು ಡೌನಿಂಗ್ ಸ್ಟ್ರೀಟ್ನಲ್ಲಿ ಪ್ರಧಾನ ಮಂತ್ರಿಯಾಗಿ ತಮ್ಮ ಮೊದಲ ಭಾಷಣವನ್ನು ಮಾಡಲಿದ್ದಾರೆ, ಈ ಸಂದರ್ಭದಲ್ಲಿ ಅವರ ಪತ್ನಿ ಅಕ್ಷತಾ ಮೂರ್ತಿ ಮತ್ತು ಪುತ್ರಿಯರಾದ ಕೃಷ್ಣ ಮತ್ತು ಅನುಷ್ಕಾ ಆಗಮೀಸಲಿದ್ದಾರೆ.
ಸಮೃದ್ಧ ಭವಿಷ್ಯವನ್ನು ನಿರ್ಮಿಸುತ್ತದೆ- ಸುನಕ್
“ಯುಕೆ ಒಂದು ಶ್ರೇಷ್ಠ ದೇಶವಾಗಿದೆ, ಆದರೆ ನಾವು ಆಳವಾದ ಆರ್ಥಿಕ ಸವಾಲನ್ನು ಎದುರಿಸುತ್ತಿದ್ದೇವೆ ಎಂಬುದರಲ್ಲಿ ಸಂದೇಹವಿಲ್ಲ” ಎಂದು ಸುನಕ್ ಸೋಮವಾರ ಚುನಾಯಿತ ಪ್ರಧಾನ ಮಂತ್ರಿಯಾಗಿ ತಮ್ಮ ಮೊದಲ ಭಾಷಣದಲ್ಲಿ ಹೇಳಿದರು.
“ನಮಗೆ ಈಗ ಬೇಕಾಗಿರುವುದು ಸ್ಥಿರತೆ ಮತ್ತು ಏಕತೆ ಮತ್ತು ನನ್ನ ಪಕ್ಷ ಮತ್ತು ನಮ್ಮ ದೇಶವನ್ನು ಒಟ್ಟಿಗೆ ತರಲು ನಾನು ನನ್ನ ಆದ್ಯತೆಯನ್ನು ನೀಡುತ್ತೇನೆ, ಏಕೆಂದರೆ ಇದು ನಮ್ಮ ಮುಂದಿರುವ ಸವಾಲುಗಳನ್ನು ಜಯಿಸಲು ಮತ್ತು ನಮ್ಮ ಮಕ್ಕಳ ಮುಂದಿನ ಪೀಳಿಗೆಯನ್ನು ರಕ್ಷಿಸಲು ಸಾಧ್ಯವಾಗುವ ಏಕೈಕ ಮಾರ್ಗವಾಗಿದೆ. – ರಿಷಿ ಸುನಕ್
ನಾನು ನಿಮಗೆ ಪ್ರಾಮಾಣಿಕತೆ ಮತ್ತು ನಮ್ರತೆಯಿಂದ ಸೇವೆ ಸಲ್ಲಿಸುತ್ತೇನೆ ಮತ್ತು ಬ್ರಿಟಿಷ್ ಜನರಿಗಾಗಿ ಹಗಲಿರುಳು ಕೆಲಸ ಮಾಡುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ.-ಸುನಕ್
210 ವರ್ಷಗಳಲ್ಲಿ ಬ್ರಿಟನ್ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಸುನಕ್ ಪಾತ್ರರಾಗಿದ್ದಾರೆ. ಯುಕೆ ಮಾಜಿ ಹಣಕಾಸು ಸಚಿವ ಸುನಕ್ ಒಬ್ಬ ಧರ್ಮನಿಷ್ಠ ಹಿಂದೂ ಆಗಿದ್ದಾರೆ .
ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ- ರುಷಿ ಸುನಕ್ ಅವರ ಮಾವ ನಾರಾಯಣ ಮೂರ್ತಿ ಹೇಳಿದರು
ಇನ್ಫೋಸಿಸ್ನ ಕಂಪನಿಯ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಅಳಿಯ ರಿಷಿ ಸುನಕ್ ಅವರನ್ನು ಬ್ರಿಟನ್ನ ಪ್ರಧಾನಿಯಾಗಿರುವುದಕ್ಕೆ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದರು, ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ನಾವು ಅವರ ಯಶಸ್ಸನ್ನು ಬಯಸುತ್ತೇವೆ ಎಂದು ಹೇಳಿದರು. ನಾರಾಯಣ ಮೂರ್ತಿ ಅವರು ಇಮೇಲ್ ಮೂಲಕ ನೀಡಿದ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ, “ಅಭಿನಂದನೆಗಳು ರಿಷಿ. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ನಿಮ್ಮ ಯಶಸ್ಸನ್ನು ಬಯಸುತ್ತೇವೆ ಎಂದು ಸಮದೇಶ ಕಳುಹಿಸಿದ್ದರು. ಬ್ರಿಟನ್ ಜನತೆಗಾಗಿ ಅವರು ತಮ್ಮ ಕೈಲಾದ ಸೇವೆ ಸಲ್ಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.