ನಟಿ ಪ್ರೀತಿ ಜಿಂಟಾಗೆ ಕಿಸ್ ಮಾಡಿದ ರಿತೇಶ್, ಕೊಪಗೊಂಡು ಪತಿಗೆ ಹೊಡೆತ ನೀಡಿದ ಜೆನಿಲಿಯಾ !
ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮತ್ತು ನಟಿ ಜೆನಿಲಿಯಾ ದಂಪತಿಗಳು ಕಾಲಕಾಲಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮನರಂಜನೆ ನೀಡುವ ವೀಡಿಯೊಗಳು ಮತ್ತು ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ.
ಇದೀಗ ಜೆನಿಲಿಯಾ ಪತಿ ರಿತೇಶ್ ದೇಶ್ ಮುಖ್ ಅವರೊಂದಿಗೆ ಮತ್ತೊಂದು ಮೋಜಿನ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ, ಈ ಸಮಯದಲ್ಲಿ ಕ್ಲಿಪ್ ಅವರಿಬ್ಬರನ್ನೇ ಒಳಗೊಂಡಿಲ್ಲ. ಪ್ರೀತಿ ಜಿಂಟಾ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಜೆನಿಲಿಯಾ ಪೋಸ್ಟ್ ಏನು ?
ಪ್ರಶಸ್ತಿ ಸಮಾರಂಭದಲ್ಲಿ ರಿತೇಶ್ ದೇಶ್ ಮುಖ್, ಪ್ರೀತಿ ಜಿಂಟಾ ಅವರೊಂದಿಗೆ ಮಾತನಾಡುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ಇಬ್ಬರು ತಮ್ಮ ಸಂಭಾಷಣೆಯನ್ನು ಮುಗಿಸುವುದನ್ನು ಜೆನಿಲಿಯಾ ತಾಳ್ಮೆಯಿಂದ ಕಾಯುತ್ತಿರುವುದನ್ನು ನಾವು ಕಾಣುತ್ತೇವೆ. ಆದರೆ, ರಿತೀಶ್ ಪ್ರೀತಿಯನ್ನು ಹಗ್ ಮಾಡಿ ಕೈಗೆ ಮುತ್ತಿಟ್ಟಾಗ ಪಕ್ಕದಲ್ಲೇ ನಿಂತಿದ್ದ ಜೆನಿಲಿಯಾ ಎಕ್ಸ್ ಪ್ರೆಷನ್ ಕ್ಯಾಮರಾ ಕಣ್ಣಲ್ಲಿ ಕೋಪ ಉಕ್ಕಿಬರುತ್ತಿರುವ ಹಾಗೆ ಸೆರೆಯಾಗಿದೆ.
ಮುಂದಿನ ದೃಶ್ಯದಲ್ಲಿ, ರಿತೇಶ್ ಕರುಣೆಯಿರಲಿ ಎಂದು ಕೈಮುಗಿದು ಕೇಳಿಕೊಳ್ಳುವ ರೀತಿಯಲ್ಲಿ ಜೆನಿಲಿಯಾ ರಿತೀಶ್ ಅವರಿಗೆ ಪಂಚ್ ನೀಡುವುದನ್ನು ನಾವು ನೋಡುತ್ತೇವೆ.
“ಮನೆಗೆ ಹಿಂದಿರುಗಿ ಏನಾಯಿತು ಎಂದು ತಿಳಿದಿದೆಯೇ?” ಎಂದು ಜೆನೆಲಿಯಾ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಮೋಜಿನ ಕ್ಲಿಪ್ ದಂಪತಿಗಳ ಹಾಸ್ಯ ಪ್ರವೃತ್ತಿಯನ್ನು ಸಾಬೀತುಪಡಿಸಿದೆ.
ಕರ್ನಾಟಕ ರಾಜ್ಯ ಪೊಲೀಸ್ ಪಡೆಯಲ್ಲಿ ಪ್ರತಿಭಾನ್ವಿತ ಕ್ರೀಡಾ ಪಟುಗಳಿಗೆ 2% ಕೋಟಾ#karnataka #statepoliceforce https://t.co/zhhkwCN6NC
— Saaksha TV (@SaakshaTv) March 22, 2021
ಆಲಿಯಾ ಯಾವತ್ತೂ ಮದುವೆಯಾಗಬಾರದು ಎಂದು ಬೆದರಿಕೆ ಹಾಕಿದ ಮಹೇಶ್ ಭಟ್ https://t.co/N0tImKAtRF
— Saaksha TV (@SaakshaTv) March 21, 2021
ಭಾರತೀಯ ರೈಲ್ವೆ ಖಾಸಗೀಕರಣಗೊಳ್ಳುವುದಿಲ್ಲ – ರೈಲ್ವೆ ಸಚಿವ ಪಿಯೂಷ್ ಗೋಯಲ್ https://t.co/OqsmzwzEPB
— Saaksha TV (@SaakshaTv) March 21, 2021