ಸುಶಾಂತ್ ಸಾವಿನ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸುಶಾಂತ್ ಪ್ರೇಯಸಿ ರಿಯಾ ವಿರುದ್ಧ ಅಕ್ರಮ ಹಣ ವರ್ಗಾವಣೆ , ಮೋಸ ಕಳ್ಳತನದ ಆರೋಪವಿದೆ. ಈ ವಿಚಾರವಾಗಿ ಈಗಾಗಲೇ ಮನಿ ಲಾಂಡರಿಂಗ್ ಕೇಸ್ ದಾಖಲಿಸಿಕೊಂಡು ಒಂದು ಸುತ್ತಿನ ವಿಚಾರಣೆ ನಡೆಸಿರುವ ಸಿಬಿಐ ಇಂದು ಮತ್ತೆ 2ನೇ ಬಾರಿಗೆ ರಿಯಾ ಚಕ್ರಬೊರ್ತಿ , ತಮ್ಮ ಶೊವಿಕ್, ತಂದೆ ಇಂದ್ರಜಿಕ್ ರನ್ನು ವಿಚಾರಣೆಗೊಳಪಡಿಸಿದೆ. ಮೊದಲ ಬಾರಿಗೆ ರಿಯಾ ಚಕ್ರೊರ್ತಿಯನ್ನು ಸತತ 8ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಇನ್ನೂ ಈ ವಿಚಾರವಾಗಿ ಶೊವಿಕ್ ಈಗಾಗಲೇ 2 ಬಾರಿ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಇದು ಮೂರನೇ ಬಾರಿಗೆ ವಿಚಾರಣೆಗೆ ಹಾಜರಾದಂತಾಗಿದೆ.
ಪಟ್ನಾ ಠಾಣೆಯಲ್ಲಿ ಸುಶಾಂತ್ ತಂದೆ ರಿಯಾ ಹಾಗೂ ಕುಟುಂಬಸ್ಥರ ವಿರುದ್ಧ ಅಕ್ರಮ ಹಣ ವರ್ಗಾವಣೆ , ಕಳ್ಳತನದ ಆರೋಪ ಹೊರೆಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಿಯಾ ವಿರುದ್ಧ ಮನಿ ಲಾಂಡರಿಂಗ್ ಆಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಇಡಿ ಅಧಿಕಾರಿಗಳು ರಿಯಾ ಚಕ್ರಬೊರ್ತಿಯ ವಾರ್ಷಿಕ ಆದಾಯ, ಬಮಡವಾಳ, ವ್ಯವಹಾರದ ಕುರಿತಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರಬೊರ್ತಿ, ಸಂಧ್ಯಾ ಚಕ್ರಬೊರ್ತಿ, ಶೊವಿಕ್ ಚಕ್ರಬೊರ್ತಿ, ಸ್ಯಾಮುಯಲ್ ಮಿರಾಂಡಾ, ಶ್ರುತಿ ಮೋದಿ, ಇಂದ್ರಜಿತತ್ ಚಕ್ರಬೊರ್ತಿ ಸೇರಿದಂತೆ ಇತರರ ವಿರುದ್ಧ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಂಚಮಸಾಲಿ ಪ್ರತಿಭಟನೆ ಗಾಯದ ಮೇಲೆ ‘ಉಪ್ಪು’ ಸವರಿದ CM & ಕಿಚ್ಚು ಹೊತ್ತಿಸಿದ ‘ಪರಂ’..!
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪಂಚಮಸಾಲಿ ಲಿಂಗಾಯತ ಸಮುದಾಯದ ಮೇಲಿನ ಲಾಠಿಚಾರ್ಜ್ ಸಂಬಂಧ ಸಮುದಾಯದ ಹೋರಾಟದ ಕಿಚ್ಚು ಜ್ವಾಲಾಮುಖಿಯಾಗಿ ಸರ್ಕಾರದ ಅಡಿಪಾಯಕ್ಕೆ ಬಿಸಿಮುಟ್ಟಿಸತೊಡಗಿದೆ ಈ ಬಗ್ಗೆ ಇನ್...