‘ಅಮಿತ್ ಸರ್ ದಯಮಾಡಿ ಸುಶಾಂತ್ ಸಾವಿನ ಪ್ರಕರಣ ಸಿಬಿಐಗೆ ಒಪ್ಪಿಸಿ” ಹೀಗೆಂದು ಕೆಲ ದಿನಗಳ ಹಿಂದಷ್ಟೇ ದಿವಂಗತ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರಬೊರ್ತಿಯೇ ಸಾಮಾಜಿಕ ಜಾಲತಾಣದಲ್ಲಿ ಇಷ್ಟುದ್ದ ಪತ್ರ ಬರೆಯುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿಕೊಂಡಿದ್ರು. ಆದ್ರೆ ಈಗ ಸಿಬಿಐ ಅಂಗಳಕ್ಕೆ ಪ್ರಕರಣ ಬಂದಿರುವ ತಕ್ಷಣವೇ ರಿಯಾ ಅದ್ಯಾವ ರೀತಿ ಉಲ್ಟಾ ಹೊಡೆದಿದ್ದಾರೆ ಗೊತ್ತಾ.
ಹೌದು ರಿಯಾ ವಿರುದ್ಧ ಸುಶಾಂತ್ ತಂದೆ ಬಿಹಾರದಲ್ಲಿ ದೂರು ದಾಖಲಿಸುತ್ತಲೇ ತಮ್ಮ ಮನೆಯಿಂದ ಗಂಟುಮೂಟೆ ಸಮೇತ ಪರಾರಿಯಾಗಿದ್ದ ರಿಯಾ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ರು. ಅಜ್ಞಾತ ಸ್ಥಳದಿಂದಲೇ ವಿಡಿಯೋ ಒಂದನ್ನ ಬಿಟ್ಟು ನಾನು ತಪ್ಪು ಮಾಡಿಲ್ಲ, ಸತ್ಯ ಗೆಲ್ಲುತ್ತೆ ಅಂದಿದ್ರು. ಹಾಗಂದವರಿಗೆ ಬಚ್ಚಿಟ್ಟುಕೊಳ್ಳುವ ಅಗತ್ಯವಾದ್ರೂ ಏನಿತ್ತು. ಇದು ಕೇವಲ ನಾಟಕವಷ್ಟೇ ಎಂದು ನೆಟ್ಟಿಗರು ರಿಯಾ ವಿರುದ್ಧ ಟೀಕಾ ಪ್ರಹಾರಗಳನ್ನ ಮಾಡುತ್ತಲೇ ಬಂದ್ರು. ಅದ್ಯಾವಾಗ ಮಹಾರಾಷ್ಟ್ರ ಸರ್ಕಾರ ಕೇಸ್ ಸಿಬಿಐಗೆ ಒಪ್ಪಿಸಲು ಹಿಂದೆ ಮುಂದೆ ನೊಡ್ತೋ ಆಗಲೇ ಬಿಹಾರದ ಸಿಎಂ ನಿತೀಶ್ ಕುಮಾರ್ ಈ ಕೆಲಸ ಮಾಡಿದ್ರು. ಆದ್ರೆ ಇದೀಗ ವಿಚಾರಣೆಗೆ ಹಾಜರಾದ ರಿಯಾ ಹೊಸ ನಾಟಕ ಶುರುಮಾಡಿದ್ದಾರೆ.
ಈ ಹಿಂದೆ ಸಿಬಿಐಗೆ ತನಿಖೆ ಒಪ್ಪಿಸಿ ಎಂದು ಬೇಡಿಕೊಂಡಿದ್ದ ರಿಯಾ ಇದೀಗ ಸಿಬಿಐ ತನಿಖೆ ಮಾಡುವಂತಿಲ್ಲ ಎಂಬ ಹೊಸ ಕಥೆ ಪ್ರಾರಂಭಿಸಿದ್ದಾರೆ.
ಹೌದು ಬಿಹಾರದ ಪಟ್ನಾ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ FIR ವಿಚಾರಣೆಯನ್ನು ಬಿಹಾರದಿಂದ ಮುಂಬೈಗೆ ವರ್ಗಾಯಿಸುವಂತೆ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆ ಇನ್ನೂ ಮುಗಿದಿಲ್ಲ. ಹೀಗಾಗಿ ಇದರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೂ ಸಿಬಿಐ ತನಿಖೆಯಿಂದ ದೂರವೇ ಇರಬೇಕು ಎಂದು ರಿಯಾ ಈಗ ವಾದಿಸೋಕೆ ಶುರುಮಾಡಿದ್ದಾರೆ. ಇನ್ನೂ ರಿಯಾ ಪರ ವಕೀಲರು ಸಹ ಒಂದು ಸ್ಟೇಟ್ ಮೆಂಟ್ ರಿಲೀಸ್ ಮಾಡಿದ್ದು, ಮಹಾರಾಷ್ಟ್ರ ಸರ್ಕಾರದ ಒಪ್ಪಿಗೆ ಇಲ್ಲದೆ ಇದ್ದರೆ ಇಲ್ಲಿ ಸಿಬಿಐ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ದೇ ಸಿಬಿಐ ತನಿಖೆ ಶುರು ಮಾಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಬೇಕಿದೆ. ಸುಶಾಂತ್ ಸಿಂಗ್ ಸತ್ತಿರುವುದು ಮುಂಬೈನಲ್ಲಿ. ಹೀಗಾಗಿ ತನಿಖೆಯನ್ನು ಮುಂಬೈ ಪೊಲೀಸರು ನಡೆಸಬೇಕು. ತನಿಖೆ ನಡೆಸಲು ತಮ್ಮ ವ್ಯಾಪ್ತಿಗೆ ಬಾರದೆ ಇರುವ ಪ್ರಕರಣವನ್ನು ಬಿಹಾರ ಸರ್ಕಾರ ಸಿಬಿಐಗೆ ಒಪ್ಪಿಸಿದೆ ಎಂದು ವಾದಿಸಿದ್ದಾರೆ.

ಆದ್ರೆ ಜು.16 ರಂದು ಸೋಷಿಯಲ್ ಮೀಡಿಯಾದಲ್ಲಿ ಅಮಿತ್ ಶಾ ಅವರನ್ನ ಟ್ಯಾಗ್ ಮಾಡಿ ಪೋಸ್ಟ್ ಒಂದನ್ನು ಹಾಕಿದ್ದ ರಿಯಾ ಹೀಗೆಂದು ಬೇಡಿಕೊಂಡಿದ್ರು. ” ನಾನು ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ. ಅವರ ನಿಧನವಾಗಿ ಒಂದು ತಿಂಗಳು ಕಳೆದಿದೆ. ಸರ್ಕಾರದ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಆದರೆ ನ್ಯಾಯದ ಸಲುವಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ. ಸುಶಾಂತ್ ಈ ನಿರ್ಧಾರ ತೆಗೆದುಕೊಳ್ಳಲು ಯಾವ ಒತ್ತಡಗಳು ಕಾರಣವಾದವು ಎಂಬುದನ್ನಷ್ಟೇ ನನಗೆ ಗೊತ್ತಾಗಬೇಕಿದೆ”. ಇದೀಗ ಇದಕ್ಕಿದ್ದ ಹಾಗೆ ಸಿಬಿಐ ತನಿಖೆ ಅಕ್ರಮವಾಗುತ್ತೆ ಅಂತಾ ಉಲ್ಟಾ ಹೊಡಿಯುತ್ತಿರುವುದು ಯಾಕೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಅದ್ರಲ್ಲೂ ನೆಟ್ಟಿಗರಂತೂ ಮೊದಲೇ ರಿಯಾ ಕಂಡ್ರೆ ಕಿಡಿಕಿಡಿ ಕೆಂಡ ಕಾರುತ್ತಿದ್ದೂ ಇದೀಗ ಹೊಸ ಕತೆ ಆರಂಭಿಸಿದ್ದಾರೆ ಎಂದು ರಿಯಾ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.








