ನಿಂತಿದ್ದ ಕಾರಿಗೆ ಟ್ರಕ್ ಡಿಕ್ಕಿ – ಮಗು , ಮಹಿಳೆಯರು ಸೇರಿ 8 ಮಂದಿ ಸಾವು
ನಿಂತಿದ್ದ ಕಾರಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮಗು ಮತ್ತು ಮೂವರು ಮಹಿಳೆಯರು ಸೇರಿದಂತೆ 8 ಜನರು ಮೃತಪಟ್ಟಿದ್ದಾರೆ. ಹರಿಯಾಣದ ಜಜ್ಜರ್ ಜಿಲ್ಲೆಯ ಕುಂಡ್ಲಿ-ಮಾನೇಸರ್-ಪಲ್ವಾಲ್ ಎಕ್ಸ್ಪ್ರೆಸ್ವೇಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಂತ್ರಸ್ತರು, ಉತ್ತರ ಪ್ರದೇಶದ ಫಿರೋಜಾಬಾದ್ನ ನಾಗ್ಲಾ ಅನೂಪ್ ಹಳ್ಳಿಯ ನಿವಾಸಿಗಳಾಗಿದ್ದು, ರಾಜಸ್ಥಾನದ ಹನುಮನ್ಗರ್ ಜಿಲ್ಲೆಯ ಗೋಗಮೇಡಿಯಿಂದ ಮನೆಗೆ ಮರಳುತ್ತಿದ್ದರು ಎನ್ನಲಾಗಿದೆ.
ಚಾಲಕ ಕಾರನ್ನು ರಸ್ತೆ ಬದಿಯಲ್ಲಿನ ಲಾರಿಯ ಮುಂಭಾಗದಲ್ಲಿ ನಿಲ್ಲಿಸಿದ್ದ. ಈ ವೇಳೆ ಹಿಂದಿನಿಂದ ಬಂದಿರುವ ಟ್ರಕ್ ಕಾರ್ ಗೆ ಗುದಿದೆ. ಗುದ್ದಿದ ರಭಸಕ್ಕೆ ಎರೆಡೂ ಲಾರಿಗಳ ನಡುವೆ ಕಾರ್ ಸಿಲುಕಿ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ.
ಇನ್ನೂ ಕಾರಿನ ಚಾಲಕ , ಒಂದು ಮಗು ಮತ್ತು ಮಹಿಳೆಯೊಬ್ಬರು ಘಟನೆಯಯಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಈ ಮೂವರು ಕಾರಿನಲ್ಲಿದ್ದ ಕಾರಣ ಬಚಾವಾಗಿರೋದಾಗಿ ತಿಳಿದುಬಂದಿದೆ.
ಮೃತಪಟ್ಟವರ ಗುರುತು ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ನಂತರ ಆರೋಪಿ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ತಲೆಮರೆಸಿಕೊಂಡ ಚಾಲಕನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ.