Road accident : 2021 ರಲ್ಲಿ ರಸ್ತೆ ಅಪಘಾತದಲ್ಲಿ 1.53 ಲಕ್ಷ ಜನ ಸಾವು….
ಕಳೆದೆರಡು ವರ್ಷಗಳಿಂದ ದೇಶದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಇಳಿಮುಖವಾಗುತ್ತಿದೆಯಾದರೂ ಸಾವು ನೋವುಗಳ ಸಂಖ್ಯೆ ಕಡಿಮೆಯಾಗಿಲ್ಲ. ಕರೋನವೈರಸ್ ಕಾರಣದಿಂದ ಲಾಕ್‌ಡೌನ್ ಇದ್ದ ಕಾರಣದಿಂದ 2020ರಲ್ಲಿ ಮಾತ್ರ ಸಾವಿನ ಸಂಖ್ಯೆಗಳು ಗಮನಾರ್ಹವಾಗಿ ಕಡಿಮೆಯಾಗಿದೆ.
ಬುಧವಾರ ಬಿಡುಗಡೆಯಾದ ಭಾರತದಲ್ಲಿನ ರಸ್ತೆ ಅಪಘಾತಗಳ ವಾರ್ಷಿಕ ವರದಿಯ ಪ್ರಕಾರ, 2021 ರಲ್ಲಿ ರಸ್ತೆಗಳಲ್ಲಿ 4.12 ಲಕ್ಷ ಅಪಘಾತಗಳು ಸಂಭವಿಸಿವೆ, ಇದರಲ್ಲಿ 1.53 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 3.84 ಲಕ್ಷಕ್ಕೂ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸಚಿವಾಲಯದ ಸಂಶೋಧನೆಗಳ ಪ್ರಕಾರ, 2019 ಕ್ಕೆ ಹೋಲಿಸಿದರೆ 2021 ರಲ್ಲಿ ರಸ್ತೆ ಅಪಘಾತಗಳು ಶೇಕಡಾ 8.1 ರಷ್ಟು ಕಡಿಮೆಯಾಗಿದೆ ಮತ್ತು ಗಾಯಳುಗಳ ಸಂಖ್ಯೆ ಶೇಕಡಾ 14.8 ರಷ್ಟು ಕಡಿಮೆಯಾಗಿದೆ.
ರಸ್ತೆ ಅಪಘಾತಗಳಿಗೆ ಕಾರಣ
ರಸ್ತೆ ಅಪಘಾತಗಳಲ್ಲಿ ಹೆಚ್ಚಿನವು ಮುಖಾಮುಖಿ ಡಿಕ್ಕಿ ಮತ್ತು ಹಿಟ್ ಅಂಡ್ ರನ್ ಪ್ರಕರಣಗಳಿಂದ ಸಂಭವಿಸಿದೆ. 2021 ರಲ್ಲಿ 57,415 ಹಿಟ್ ಅಂಡ್ ರನ್ ಪ್ರಕರಣಗಳು ಸಂಭವಿಸಿವೆ ಎಂದು ಸಚಿವಾಲಯದ ವರದಿ ಹೇಳುತ್ತದೆ, ಆದರೆ 2020 ರಲ್ಲಿ ಅಂತಹ ರೀತಿಯ ಘಟನೆಗಳ ಸಂಖ್ಯೆ 52, 448 ಆಗಿದ್ದು, ಇದರಲ್ಲಿ 23,159 ಜನರು ಸಾವನ್ನಪ್ಪಿದ್ದಾರೆ ಮತ್ತು 43, 789 ಜನರು ಗಾಯಗೊಂಡಿದ್ದಾರೆ. 2021 ರಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಿಂದ ಸಾವನ್ನಪ್ಪಿದವರು 25,938 ಮತ್ತು 45,355 ಜನರು ಗಾಯಗೊಂಡಿದ್ದಾರೆ.
Road accident : India registered 1.53 lakh deaths in 2021 no decline in road accident