ಕೋಲಾರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ Road Safety Sector saaksha tv
ಕೋಲಾರ : ಕೇವಲ ಪೊಲೀಸರ ಭಯದಿಂದ ಮಾತ್ರ ಹೆಲ್ಮೆಟ್ ಧರಿಸುವುದು ಬಿಟ್ಟು ನಮ್ಮ ರಕ್ಷಣೆಗಾಗಿಯಾದರೂ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ವಾಹನ ಚಾಲನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮನವಿ ಮಾಡಿಕೊಂಡಿದ್ದಾರೆ.
ನಗರದ ಮೆಕ್ಕೆ ವೃತ್ತದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ರಸ್ತೆ ಸುರಕ್ಷಾ ಸಪ್ತಾಹ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಾವುದೇ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಅದರಿಂದ ಆದ ಸಾವು ನೋವುಗಳು ಮಾತ್ರ ಅವರ ಕುಟುಂಬಕ್ಕೆ ಗೊತ್ತಾಗುತ್ತದೆ. ಪೊಲೀಸರು ರಸ್ತೆ ಸುರಕ್ಷತೆಯ ಹೆಸರಿನಲ್ಲಿ ಕೇಸ್ ಮಾಡುತ್ತಾರೆ ಎಂಬುದನ್ನು ಬಿಟ್ಟು ನಮ್ಮ ರಕ್ಷಣೆಯ ಮುಖ್ಯವಾಗಿ ನಾವೆಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಬೇಕಾಗಿದೆ ಎಂದರು
ಮುಂದಿನ ವರ್ಷ ಪ್ರಾರಂಭದಿಂದ ವಾಹನ ಸವಾರರು ಕಡ್ಡಾಯವಾಗಿ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸಿದ್ದು ಸಾರ್ವಜನಿಕರು ಪಿ ಇಲಾಖೆಯ ಜೊತೆಯಲ್ಲಿ ಸಹಕರಿಸಬೇಕು. ತಾವು ಹೆಲ್ಮೆಟ್ ಧರಿಸುವ ಜೊತೆಗೆ ತಮ್ಮ ಸುತ್ತಲಿನ ಅವರಿಗೂ ಅಪಘಾತದ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.
ಸಮಾಜ ಸೇವಕ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಮಾತನಾಡಿ ಪ್ರತಿವರ್ಷ ರಸ್ತೆ ಸುರಕ್ಷತೆ ಬಗ್ಗೆ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ನಡೆಸಿಕೊಂಡು ಬರುತ್ತಿದೆ ಸಾರ್ವಜನಿಕರು ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ದಾಖಲೆಗಳನ್ನು ಇಟ್ಟುಕೊಂಡು ಚಾಲನೆ ಮಾಡಬೇಕಾಗಿದೆ. ಇಂತಹ ರಸ್ತೆ ಸುರಕ್ಷತಾ ಪಾಲನೆಯಲ್ಲಿ ಇಲಾಖೆಯ ಜೊತೆಯಲ್ಲಿ ನಮಗೂ ಕಾಳಜಿ ಇದ್ದು ನಾವೆಲ್ಲರೂ ಕೂಡ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ನಮ್ಮ ರಕ್ಷಣೆಯಿಂದ ಜೀವ ಉಳಿಯುತ್ತದೆ ಎಂಬುದನ್ನು ನಾವೆಲ್ಲ ಕೂಡ ಅರ್ಥಮಾಡಿಕೊಂಡು ಸಮಾಜದಲ್ಲಿ ಪೊಲೀಸರ ರೊಂದಿಗೆ ಸಹಕರಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ಉಚಿತವಾಗಿ ಹೆಲ್ಮಟ್ ವಿವರಿಸಿದರು ಸಾರ್ವಜನಿಕರು ಅಪಘಾತಗಳಿಂದಾಗುವ ತೊಂದರೆಗಳ ಬಗ್ಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ಡಿವೈಎಸ್ಪಿ ರಮೇಶ್, ವೃತ್ತ ನಿರೀಕ್ಷಕರಾದ ಅಂಜಿನಪ್ಪ, ರಾಘವೇಂದ್ರ ಪ್ರಸಾದ್, ಹರೀಶ್ ಸಿಬ್ಬಂದಿ ಸಾರ್ವಜನಿಕರು ಇದ್ದರು.









