ಆ್ಯಸಿಡ್ ಕುಡಿಸಿ ಅಕ್ಕಸಾಲಿಗನನ್ನು ಹತ್ಯೆ ಮಾಡಿದ ದುಶ್ಕರ್ಮಿಗಳು – Saaksha Tv
ಕಲಬುರಗಿ: ಆ್ಯಸಿಡ್ ಕುಡಿಸಿ ರಾಡ್ನಿಂದ ಹೊಡೆದು ಅಕ್ಕಸಾಲಿಗನನ್ನು ಬರ್ಬರ ಹತ್ಯೆ ಮಾಡಿರುವ ಭಯಾನಕ ಘಟನೆ ಚಿತ್ತಾಪುರ ತಾಲೂಕಿನ ರಾವೂರ್ ಕ್ರಾಸ್ ಬಳಿ ನಡೆದಿದೆ.
ವಿಜಯಕುಮಾರ್ ಶಿಲವಂತ (38) ಕೊಲೆಯಾದ ಅಕ್ಕಸಾಲಿಗ. ಈತನಿಂದ ಹಣ ಚಿನ್ನಾಭರಣ ಕಸಿದುಕೊಂಡು ಹತ್ಯೆ ಮಾಡಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಕಸಾಲಿಗ ವಿಜಯಕುಮಾರ್ ಶಿಲವಂತ ಕಲಬುರಗಿಯ ಶಹಬಜಾರ ಕಬಾಡ್ಗಲ್ಲಿ ನಿವಾಸಿಯಾಗಿದ್ದಾನೆ. ಆರು ಲಕ್ಷ ರೂಪಾಯಿ ನಗದು ಹಣದೊಂದಿಗೆ ಚಿನ್ನಾಭರಣ ತರಲು ಹಲಕರ್ಟಿ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ಹಾಗೂ ಆತನ ಬಳಿಯಿದ್ದ ಚಿಕ್ಕಪುಟ್ಟ ಚಿನ್ನಾಭರಣ ದೋಚಿದ್ದಾರೆ.
ಇಷ್ಟಕ್ಕೆ ಬಿಡದ ದುಷ್ಕರ್ಮಿಗಳು, ವಿಜಯಕುಮಾರಗೆ ಆ್ಯಸಿಡ್ ಕುಡಿಸಿ ರಾಡ್ನಿಂದ ಹೊಡೆದು ಹತ್ತೆಗೈಯ್ದು ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು ವಿಜಯಕುಮಾರ್ರನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ವಿಜಯಕುಮಾರ್ ಕೊನೆಯುಸಿರೆಳೆದಿದ್ದಾರೆ.









