ಕಲಬುರಗಿ: ಮಗಳ ಮದುವೆಗಾಗಿ ಸಾಲ ಮಾಡಿ ತಂದಿದ್ದ 2 ಲಕ್ಷ ಮೌಲ್ಯದ ಬಟ್ಟೆ, ಪಾತ್ರೆ, ದಿನಸಿ ವಸ್ತುಗಳನ್ನು ಕಳ್ಳರು ದೋಚಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ನಗರದ ಎನ್‍ಜಿಒ ಕಾಲೋನಿಯಲ್ಲಿ ನಡೆದ ಖದೀಮರ ಕೃತ್ಯಕ್ಕೆ ಬಡ ಕುಟುಂಬ ಕಣ್ಣೀರು ಹಾಕುತ್ತಿದೆ.

ಶಂಕರರಾವ್ ಕುಲಕರ್ಣಿ ಎಂಬುವರ ಮಗಳ ಮದುವೆ ಜನವರಿ 3ರಂದು ನಿಶ್ಚಯವಾಗಿದೆ. ಶಂಕರರಾವ್-ಉಮಾ ಕುಲಕರ್ಣಿ ದಂಪತಿಯ ಪುತ್ರಿ ಪ್ರಿಯಾ ಅವರ ವಿವಾಹ ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಮನ್ನಾ ಎಖೆಳ್ಳಿ ಗ್ರಾಮದ ಅನಿರುದ್ಧ ಅವರೊಂದಿಗೆ ನಡೆಯಲಿದೆ. ಅದಕ್ಕಾಗಿ ಮುಂಚೆಯೇ ದಿನಸಿ, ಬಟ್ಟೆ, ಪಾತ್ರೆಗಳನ್ನು ಖರೀದಿಸಿ ಮನೆಯಲ್ಲಿ ಇರಿಸಲಾಗಿತ್ತು. ಶಂಕರರಾವ್ ಅವರು ಇನ್ನೊಂದು ಮನೆಯಲ್ಲಿ ವಾಸವಾಗಿದ್ದರು. ಬೆಳಿಗ್ಗೆ ಬಂದು ನೋಡಿದಾಗ ವಸ್ತುಗಳೆಲ್ಲ ಕಳ್ಳತನವಾಗಿದ್ದವು. ಮಗಳ ಮದುವೆಗಾಗಿ ಸಾಲ ಸೋಲ ಮಾಡಿ ವಸ್ತುಗಳನ್ನು ತಂದಿಟ್ಟಿದ್ದರು. ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳೆದುಕೊಂಡ ಕುಲಕರ್ಣಿ ಕುಟುಂಬ ಕಂಗಾಲಾಗಿದ್ದು, ಕಣ್ಣೀರಿಡುತ್ತಿದೆ. ಅಶೋಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








