ಹೊಸ ದಾಖಲೆ ಬರೆದ ಡಿ ಬಾಸ್ ‘ರಾಬರ್ಟ್’..!
ಕೊರೊನಾ ಹಾವಳಿ ತಗ್ಗಿದ ಬೆನ್ನಲ್ಲೇ, 100 % ಸೀಟಿಂಗ್ ಅವಕಾಶ ಸಿಕ್ಕ ನಂತರ ಗ್ರ್ಯಾಂಡ್ ಆಗಿ ಸಿನಿಮಾ ಮಂದಿರಗಳಿಗೆ ಎಂಟ್ರಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ರಾಬರ್ಟ್’ ಸಿನಿಮಾ ಹಿಟ್ ಆಗಿತ್ತು..
ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿಯೂ ದಾಖಲೆ ಬರೆದಿತ್ತು.. ಈಗ ರಿಲೀಸ್ ಆಗಿ ಸುಮಾರು ತಿಂಗಳುಗಳೇ ಕಳೆದa ನಂತರ ಒಂದು ಹೊಸ ದಾಖಲೆ ಬರೆದಿದೆ..
ಹೌದು .. ಬುಕ್ ಮೈ ಶೋ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ 2021ರಲ್ಲಿ ಹೆಚ್ಚಿನ ಬೇಡಿಕೆ ಇದ್ದ ಸಿನಿಮಾ ಎಂಬ ಹೆಗ್ಗಳಿಕೆ Robbert ಸಿನಿಮಾದು..

ಬೆಂಗಳೂರಿನಲ್ಲಿ ಈ ವರ್ಷ ರಾಬರ್ಟ್ ಅತಿ ಹೆಚ್ಚು ಬೇಡಿಕೆ ಇದ್ದ ಚಿತ್ರ ಎನ್ನುವುದು ಸರ್ವೆ ಇಂದ ಗೊತ್ತಾಗಿದೆ. ಈ ವಿಚಾರವನ್ನು ಬುಕ್ ಮೈ ಶೋ ಪೇಜ್ ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಈ ಸಾಲಿನಲ್ಲಿ ಇರುವ ಏಕೈಕ ಕನ್ನಡ ಚಿತ್ರ ಕೂಡ ಇದೇ ಆಗಿದೆ.ಈ ಸಮೀಕ್ಷೆಯನ್ನ ಯಾವ ಯಾವ ಸಿಟಿಗಳಲ್ಲಿ ಯಾವ ಸಿನಿಮಾಗೆ ಹೆಚ್ಚು ಕ್ರೇಜ್ ಇತ್ತು ಅನ್ನೋದನ್ನ ಬೇಸ್ ಆಗಿಸಿಕೊಂಡು ನಡೆಸಲಾಗಿದೆ..
ಈ ಸಮೀಕ್ಷೆಯಲ್ಲಿ ಬೆಂಗಳೂರು , ಹೈದ್ರಾಬಾದ್ , ಚೆನ್ನೈ , ಮುಂಬೈ ಸಿಟಿಗಳು ಇದ್ದು, ಬೆಂಗಳೂರಿನಲ್ಲಿ ‘ರಾಬರ್ಟ್’, ಚೆನ್ನೈನಲ್ಲಿ ‘ಮಾಸ್ಟರ್’, ಮುಂಬೈನಲ್ಲಿ ‘ಸೂರ್ಯವಂಶಿ’ , ಹೈದ್ರಾಬಾದ್ ನಲ್ಲಿ ‘ಜಾತಿ ರತ್ನಾಲು’ ಸಿನಿಮಾಗಳು ಅಗ್ರ ಸ್ಥಾನದಲ್ಲಿವಿದೆ..







