ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರ ಇನ್ನೇನು ತೆರೆಗೆ ಬರುವುದಷ್ಟೇ ಬಾಕಿಯಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಜಾತಕಪಕ್ಷಿಗಳಂತೆ ಯಾವಾಗ ಬಿಡುಗಡೆಯಾಗುತ್ತೆ ಅಂತ ಕಾಯುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಯುವ ಪ್ರತಿಭೆಗೆ ಡೈರೆಕ್ಟರ್ ಪಟ್ಟ ಒಲಿದುಬಂದಿದೆ. ಹೌದು ರಾಬರ್ಟ್ ಚಿತ್ರಕ್ಕೆ ಸಂಭಾಷಣೆ ರಚಿಸಿದ್ದ ರಾಜಶೇಖರ್ ಸ್ಟಾರ್ ನಟರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಹೌದು ಹಾಸ್ಯ ನಟ ಕೋಮಲ್ ಅವರ ಹೊಸ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಅಲ್ದೇ ರಾಜಶೇಖರ್ ಡೈರೆಕ್ಷನ್ ನಲ್ಲಿ ಮೂಡಿಬರಲಿರುವ ಚೊಚ್ಚಲ ಚಿತ್ರ ಪಕ್ಕಾ ಹ್ಯಾಸ್ಯ ಪ್ರಧಾನ ಸಿನೆಮಾವಾಗಿರಲಿದೆ. ಇನ್ನೂ ಅಯೋಗ್ಯ, ಚಮಕ್, ಬುದ್ದಿವಂತ 2, ಶೋಕಿವಾಲದಂತಹ ದೊಡ್ಡ ದೊಡ್ಡ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಟಿಆರ್ ಚಂದ್ರಶೇಖರ್ ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ರಾಬರ್ಟ್ ಗೂ ಮುಂಚೆ ರಾಜಶೇಖರ್ ಅವರು ಮಜಾ ಟಾಕೀಸ್, ಅಮ್ಮ ಐ ಲವ್ ಯೂ, ವಿಕ್ಟರಿ 2 ಸಿನೆಮಾಗಳಲ್ಲು ಕೆಲಸ ಮಾಡಿದ್ದಾರೆ.