Robert
ಚಾಲೆಂಜಿಂಗ್ ಸ್ಟಾರ್ ದರ್ಸನ್ ಅಭಿನಯದ ಬಹುನಿರೀಕ್ಷಿತ ಚಿತ್ರವಾಗಿರುವ ರಾಬರ್ಟ್ ನ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ರಿಲೀಸ್ ಆಗುವ ಹಂತಕ್ಕೆ ತಲುಪಿದೆ.
ಈಗಾಗಲೇ ಥಿಯೇಟರ್ ಗಳ ಪುನರಾರಂಭವೂ ಆಗಿದ್ದು, ಅಭಿಮಾನಿಗಳಿಗೆ “ರಾಬರ್ಟ್” ನ ದರ್ಶನ ಯಾವಾಗ ಆಗಲಿದೆ ಎಂಬ ಕಾತರತೆ ಡಿ ಬಾಸ್ ಭಕ್ತರಲ್ಲಿ ಮನೆಮಾಡಿದೆ.
ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಕ್ರಿಸ್ ಮಸ್ ಗೆ ಡಿ ಬಾಸ್ ತೆರಮೇಲೆ ಬರ್ತಾಯಿದ್ದಾರೆ ಎನ್ನಲಾಗಿದೆ.
ಹೌದು.. ರಾಬರ್ಟ್ ಕ್ರಿಸ್ಮಸ್ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. 
ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿದ ಮತ್ತು ಉಮಾಪತಿ ಎಸ್ ಗೌಡ ನಿರ್ಮಿಸಿರುವ ಈ ಚಿತ್ರ ಡಿಸೆಂಬರ್ 25 ರಂದು ಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ ಎನ್ನಲಾಗಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ರಾಬರ್ಟ್ ಏಪ್ರಿಲ್ 9 ರಂದು ಬಿಡುಗಡೆಯಾಗಬೇಕಿತ್ತು.
ಆದರೆ, ಸಾಂಕ್ರಾಮಿಕ ರೋಗದಿಂದಾಗಿ ದಿನಾಂಕವನ್ನು ಮುಂದಕ್ಕೆ ಹಾಕಲಾಯಿತು.
ಉಮಾಪತಿ ಫಿಲ್ಮ್ಸ್ ನಿರ್ಮಿಸಿದ ರಾಬರ್ಟ್ ಚಿತ್ರದ ಪೋಸ್ಟರ್ಗಳು, ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ.
ಶಾರೂಖ್ – ಕಾಜೋಲ್ ಜೋಡಿಯ ಸೂಪರ್ ಹಿಟ್ ಸಿನಿಮಾ ‘ಆಆಐಎ’ ರೀ ರಿಲೀಸ್..!
ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದರೆ, ಸುಧಾಕರ್ ಎಸ್ ರಾಜ್ ಛಾಯಾಗ್ರಹಣವಿದೆ.
ಈ ಚಿತ್ರದ ಮೂಲಕ ಆಶಾ ಭಟ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಜಗಪತಿ ಬಾಬು ವಿಲನ್ ರೋಲ್ ನಲ್ಲಿದ್ದು , ವಿನೋದ್ ಪ್ರಭಾಕರ್, ಸೋನಾಲ್ ಮಾಂಟೆರೋ, ರವಿ ಕಿಶನ್, ಶಿವರಾಜ್ ಕೆ ಆರ್ ಪೇಟ್ , ಚಿಕ್ಕಣ್ಣ ಮತ್ತು ಧರ್ಮಣ್ಣ ಕಡೂರ್ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Robert
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








