ಬೆಂಗಳೂರು : ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ, ಡಿ ಬಾಸ್ ಅಭಿಮಾನಿಗಳು ಕೋಟಿ ಕಣ್ಣುಗಳಿಂದ ಕಾದುನೋಡುತ್ತಿರುವ ಸಿನಿಮಾ ರಾಬರ್ಟ್. ಈಗಾಗಲೇ ಹಾಡು, ಟೀಸರ್ ಗಳ ಮೂಲಕ ಚಂದನವನದಲ್ಲಿ ಭಾರಿ ಸದ್ದು ಮಾಡುತ್ತಿರುವ ರಾಬರ್ಟ್, ಈಗ ರಗಡ್ ಲುಕ್ ನಲ್ಲಿ ಮಾಸ್ ಎಂಟ್ರಿ ಕೊಟ್ಟಿದ್ದಾನೆ. ರಂಜಾನ್ ಹಬ್ಬದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ನಲ್ಲಿ ದಚ್ಚು,ಉದ್ದ ಕೂದಲು, ಗಡ್ಡ ಬಿಟ್ಟಿದ್ದು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಂದು ಪೋಸ್ಟರ್ ರಿಲೀಸ್ ಮಾಡುವ ಬಗ್ಗೆ ಭಾನುವಾರವೇ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ ಮೇ 25ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದರ್ಶನ್ ಅವರ ಖಾತೆಯಿಂದ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು. ಅದರಂತೆಯೇ ಇಂದು ಚಿತ್ರದ ಪೋಸ್ಟರ್ ನಟ ದರ್ಶನ್ ಅವರ ಖಾತೆಯಿಂದ ಬಿಡುಗಡೆಯಾಗಿದೆ
ರಂಜಾನ್ ಗೆ ದರ್ಶನ್ ವಿಶ್!
“ಎಲ್ಲಾ ನಲ್ಮೆಯ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ಧಿಕ ಶುಭಾಶಯಗಳು. ನಮ್ಮ ರಾಬರ್ಟ್ ಚಿತ್ರದ ಪೋಸ್ಟರ್ ನಿಮಗಾಗಿ. ಎಲ್ಲರ ಜೀವನಶೈಲಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಚಿತ್ರವೂ ನಿಮ್ಮ ಮಡಿಲಿಗೆ ಸೇರಲಿದೆ. ಮನೆಯಲ್ಲಿ ಇರಿ, ಮನೆಯವರಿಗಾಗಿ ಜಾಗೃತರಾಗಿರಿ” ಎಂದು ಟ್ವೀಟ್ ಮಾಡಿದ್ದಾರೆ ದಾಸ.
ಇನ್ನು ಎಲ್ಲಾ ಅಂದುಕೊಂಡಂತೆ ಆಗಿದಿದ್ದರೇ ಈಗಾಗಲೇ ರಾಬರ್ಟ್ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಆದರೆ ಕೊರೊನಾದಿಂದ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ.a