‘ರಾಬರ್ಟ್’ ನಲ್ಲಿ ಹೇಗಿದೆ ಗೊತ್ತಾ ಜಗಪತಿ ಲುಕ್ : ಫಸ್ಟ್ ಲುಕ್ ರಿಲೀಸ್..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷೆಯ ಚಿತ್ರವಾದ ರಾಬರ್ಟ್ ಸಿನಿಮಾದ ಖಳನಾಯಕನ ಫಸ್ಟ್ ಲುಕ್ ಇಂದು ರಿವೀಲ್ ಆಗಿದೆ. ಹೌದು ಖ್ಯಾತ ನಟ ಜಗಪತಿ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ವಿಶೇಷ ಅಂದ್ರೆ ಇಂದು ಜಗಪತಿ ಬಾಬುಗೆ ಹುಟ್ಟುಹಬ್ಬದ ಸಂಭ್ರಮ. ಇದೇ ಪ್ರಯುಕ್ತ ಅವರ ವಿಲ್ಲನ್ ಲುಕ್ ರಿಲೀಸ್ ಮಾಡಿ ಹುಟ್ಟುಹಬ್ಬದ ಶುಭಕೋರಿದೆ ಚಿತ್ರತಂಡ. ಇನ್ನೂ ಜಗಪತಿ ಬಾಬು ಡೇರಿಂಗ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಮೆಂಟ್ ಗಳ ಮೂಲಕ ಜಗಪತಿ ಬಾಬುಗೆ ಶುಭಕೋರ್ತಿದ್ದಾರೆ.
ಅಷ್ಟೇ ಅಲ್ಲ ಮದಗಜ ಚಿತ್ರದಲ್ಲೂ ಸಹ ಖಡಕ್ ವಿಲ್ಲನ್ ಆಗಿ ಕಾಣಿಸಿಕೊಂಡಿರುವ ಜಗಪತಿ ಬಾಬು ಅವರ ಮದಗಜ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಮ್ಮ ಇನ್ ಸ್ಟಾಗ್ರಾಂನಲ್ಲಿ ಈ ಪೋಸ್ಟರ್ ಅನ್ನು ಅಪ್ ಲೋಡ್ ಮಾಡುವ ಮೂಲಕ ಜಗಪತಿ ಬಾಬು ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ರಾಬರ್ಟ್ ಸಿನಿಮಾ ಮಾರ್ಚ್ 11 ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಕನ್ನಡ ತೆಲುಗಿನಲ್ಲಿ ಟೀಸರ್ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡ್ತಿದೆ.
https://www.instagram.com/p/CLLc65glGe-/?utm_source=ig_embed
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








