ರಾಬಿನ್ ಉತ್ತಪ್ಪ, ಆರಂಭದ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ಅದ್ಭುತ ಆಟಗಾರ. ಒನ್ ಡೇ, ಟಿ-20 ಮಾದರಿಗೆ ಹೇಳಿ ಮಾಡಿಸಿದ್ದಂತೆ ರಾಬಿನ್ ಬ್ಯಾಟ್ ಬೀಸುತ್ತಿದ್ದರು. ಉತ್ತಪ್ಪ ಟೀಂ ಇಂಡಿಯಾ ಪರ ಆಡುವಾಗ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಅಂದು ರಾಬಿನ್ ಬ್ಯಾಟಿಂಗ್ ಶೈಲಿಗೆ ಯುವಕರು ಫಿದಾ ಆಗಿದ್ದರು
ಆರಂಭದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಉತ್ತಪ್ಪ, ಕೆಲ ಸಮಯದ ನಂತ್ರ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾದರು. ಪರಿಣಾಮ ಟೀಂ ಇಂಡಿಯಾದಿಂದ ಅವರು ಹೊರಬಿದ್ದರು. ಏರುಗತಿಯಲ್ಲಿ ಸಾಗುತ್ತಿದ್ದ ಉತ್ತಪ್ಪ ಕ್ರಿಕೆಟ್ ಬದುಕು ಕುಸಿಯಲು ಆರಂಭಿಸಿತ್ತು. ಇದಕ್ಕೆ ಕಾರಣ ಉತ್ತಪ್ಪರ ಆ ಒಂದು ನಿರ್ಧಾರ. ಅಂದು ಅವರು ಆ ತಪ್ಪು ಮಾಡದೇ ಇದ್ದಿದ್ದರೇ ಇಂದು ರಾಬಿನ್ ಸ್ಟಾರ್ ಆಟಗಾರನಾಗಿ ಬೆಳೆಯುತ್ತಿದ್ದರೇನೊ.
ಆ ಕನಸಿನ ಬೆನ್ನತ್ತಿ ಕೆರಿಯರ್ ಹಾಳು ಮಾಡಿಕೊಂಡ್ರು ರಾಬಿನ್
ಅಂದು ರಾಬಿನ್ ತೆಗೆದುಕೊಂಡ ನಿರ್ಧಾರ ಅವರ ಕ್ರಿಕೆಟ್ ಕೆರಿಯರ್ ಅನ್ನೇ ಹಾಳು ಮಾಡ್ತು. ಈ ಬಗ್ಗೆ ಸ್ವತಃ ರಾಬಿನ್ ಉತ್ತಪ್ಪ ಹೇಳಿಕೊಂಡಿದ್ದಾರೆ. ಟೀಂ ಇಂಡಿಯಾದಿಂದ ಹೊರಬೀಳಲು ಕಾರಣವಾದ ಒಂದು ಅಂಶವನ್ನು ಉತ್ತಪ್ಪ ಬಹಿರಂಗಪಡಿಸಿದ್ದಾರೆ.
ಸೀಮಿತ ಓವರ್ ಗಳಲ್ಲಿ ರಾಬಿನ್ ಬೊಂಬಾಟ್ ಪ್ರದರ್ಶನ ನೀಡುತ್ತಿದ್ದರು. ಆದರೆ ಉತ್ತಪ್ಪ ಅವರ ಕನಸು ಬೇರೆಯೇ ಆಗಿತ್ತು. ಆ ಕನಸನ್ನು ಬೆನ್ನತ್ತುವ ಪ್ರಯತ್ನ ಮಾಡಿದ್ದ ಅವರು, ಅದಕ್ಕಾಗಿ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು. ಆದರೆ ಇದು ಉತ್ತಪ್ಪ ಅವರ ಒಟ್ಟಾರೆ ಬ್ಯಾಟಿಂಗ್ ಮೇಲೆಯೇ ಪರಿಣಾಮ ಬೀರಿತು.
ಏನ್ ಆ ಕನಸು..?
ಏಕದಿನ, ಟಿ-20 ಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದ ರಾಬಿನ್, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕೆಂದು ಕನಸು ಕಂಡಿದ್ದರು. ಅದಕ್ಕಾಗಿ ಸ್ಫೋಟಕವಾಗಿ ಆಡುತ್ತಿದ್ದ ಉತ್ತಪ್ಪ ಒಂದಷ್ಟು ಬದಲಾವನೆ ಮಾಡುವ ನಿರ್ಧಾರವನ್ನು ಮಾಡಿದರು. ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ ಪರ ಆಡುತ್ತಿರುವ ಉತ್ತಪ್ಪ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಸೆಷನ್ ನಲ್ಲಿ ತಮ್ಮ ವೃತ್ತಿ ಜೀವನ ಕುರಿತು ಆಸಕ್ತಿಕರ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. “ನಾನು 25ನೇ ವಯಸ್ಸಿನಲ್ಲಿ ಬ್ಯಾಟಿಂಗ್ ಟೆಕ್ನಿಕ್ ಬದಲಿಸಿಕೊಂಡಿದ್ದೆ. ಅಲ್ಲಿವರೆಗೂ ಸ್ಥಿರವಾಗಿ ಸಾಗುತ್ತಿದ್ದ ನನ್ನ ಬ್ಯಾಟಿಂಗ್ ಸ್ಪೀಡ್ ಕಡಿಮೆ ಆಗಿತ್ತು. ಸ್ಫೋಟಕ ಬ್ಯಾಟಿಂಗ್ ಗೆ ಬ್ರೇಕ್ ಬಿತ್ತು” . ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಮುಖ್ಯ ಗುರಿಯಾಗಿತ್ತು. ಇದರಂತೆ ನಾನು 20-21ರ ವಯಸ್ಸಿನಲ್ಲೇ ಪ್ರಯತ್ನ ನಡೆಸಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ ತಡವಾಗಿ ಆ ಪ್ರಯತ್ನವನ್ನು ಮಾಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ರಾಬಿನ್, ಅಬ್ಬರದ ಬ್ಯಾಟಿಂಗ್ ಗೆ ಬ್ರೇಕ್ ಹಾಕಿದ್ದರು. ಇದು ಅವರ ಕೈ ಹಿಡಿಯಲಿಲ್ಲ. ಬ್ಯಾಟಿಂಗ್ ಶೈಲಿ ಬದಲಿಕೊಂಡ ಕಾರಣ ರಾಬಿನ್, ತಂಡದಲ್ಲಿ ಬ್ಯಾಕ್ ಟು ಬ್ಯಾಕ್ ವೈಫಲ್ಯ ಕಾಣುತ್ತಿದ್ದರು. ಇದರಿಂದ ಆಯ್ಕೆ ಸಮಿತಿ ತಂಡದಿಂದ ಉತ್ತಪ್ಪರನ್ನು ಕೈ ಬಿಟ್ಟರು. ಬಳಿಕ ಸಾಕಷ್ಟು ಪ್ರಯತ್ನಗಳ ನಡುವೆವೂ ರಾಬಿನ್ ಕಮ್ ಬ್ಯಾಕ್ ಮಾಡಲು ಸಾಧ್ಯವಾಗಲೇ ಇಲ್ಲ.