ಐಪಿಎಲ್ ಹರಾಜು ಪ್ರಾಣಿಗಳ ಸಂತೆಯಂತಿದೆ
ಐಪಿಎಲ್ ಮೆಗಾ ಹರಾಜಿನ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ರಾಬಿನ್ ಉತ್ತಪ್ಪ ಐಪಿಎಲ್ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಐಪಿಎಲ್ ಹರಾಜು ಎಳ್ಳಷ್ಟೂ ಚೆನ್ನಾಗಿಲ್ಲ, ಹರಾಜನ್ನ ನೋಡುತ್ತಿದ್ದರೇ ಸಂತೆಯಲ್ಲಿ ಜಾನುವಾರುಗಳ ಹರಾಜು ನೋಡುವಂತೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೋ ವಸ್ತುವಿಗಾಗಿ ಫ್ರಾಂಚೈಸಿಳು ಪೈಪೋಟಿ ನಡೆಸುತ್ತಿರುವ ರೀತಿ ಅನಿಸುತ್ತಿದೆ. ಹರಾಜಿನಲ್ಲಿರುವ ಆಟಗಾರರು ಕೂಡ ಮನುಷ್ಯರೇ ಎಂಬುದನ್ನ ಫ್ರಾಂಚೈಸಿಗಳು ಮರೆತು ಹೋಗಿದ್ದಾರೆ.
ಹರಾಜಿನಲ್ಲಿ ಮಾರಾಟವಾಗದ ಆಟಗಾರರ ಮಾನಸಿಕ ಸ್ಥಿತಿ ಎಷ್ಟು ಹದಗೆಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಇದು ಹೇಳಲಾಗದಷ್ಟು ನೋವು ತರುತ್ತದೆ. ಆಟಗಾರರ ಹರಾಜು ಪ್ರಕ್ರಿಯೆ ಭಾರತದಲ್ಲಿ ಮಾತ್ರ ನಡೆಯುತ್ತಿದೆ, ಇದಕ್ಕೆ ಫುಲ್ ಸ್ಟಾಪ್ ಇಟ್ಟರೇ ಚೆನ್ನಾಗಿರುತ್ತದೆ ಎಂದು ಉತ್ತಪ್ಪ ಹೇಳಿದ್ದಾರೆ.
ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ರಾಬಿನ್ ಉತ್ತಪ್ಪಗೆ ರೂ. 2 ಕೋಟಿ ಮೂಲ ಬೆಲೆಯಲ್ಲಿ ಖರೀದಿಸಿದೆ.
ಕಳೆದ ಋತುವಿನಲ್ಲಿ ಅವರು ಇದೇ ತಂಡದ ಪರ ಆಡಿದ್ದರು. ಉತ್ತಪ್ಪ ಅವರು 2006 ಮತ್ತು 2015 ರ ನಡುವೆ ಭಾರತಕ್ಕಾಗಿ 46 ODI ಮತ್ತು 13 T20I ಪಂದ್ಯಗಳನ್ನು ಆಡಿದ್ದಾರೆ.
robin-uthappa-reveals-his-opinion-on-ipl-auction