ಕೊಟ್ಟ ಮಾತು ಉಳಿಸಿಕೊಂಡ ಯಶ್ , ಕಲಾವಿದರ ಖಾತೆಗಳಿಗೆ ಹಣ ಜಮಾ..!
ಕೊರೊನಾ ಲಾಕ್ ಡೌನ್ ನಿಂದಾಗಿ ರಾಜ್ಯ ತತ್ತರಿಸಿಹೋಗಿದೆ.. ಬಡವರು ಸಂಕಷ್ಕ್ಕೆ ಸಿಲುಕಿದ್ದಾರೆ.. ಸಿನಿಮಾರಂಗವನ್ನೇ ಅವಲಂಬಿತವಾಗಿರುವ ಸಾವಿರಾರು ಕಾರ್ಮಿಕರ ಕುಟುಂಬಗಳು ಸಂಕಷ್ಕ್ಕೆ ಸಲುಕಿವೆ.. ಈ ನಡುವೆ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ. ಕಿಚ್ಚ ಸುದೀಪ್ , ಉಪೇಂದ್ರ , ಸಾಧುಕೋಕಿಲ , ಶೋಭರಾಜ್ ಸೇರಿದಂತೆ ಇನ್ನೂ ಅನೇಕರು ಸಹಾಯಾಸ್ತ ಚಾಚಿದ್ದಾರೆ..
ಅದ್ರಂತೆ ರಾಖಿ ಭಾಯ್ ಸಹ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾರಂಗದ ಕಾರ್ಮಿಕರ ನೆರವಿಗೆ ಧಾವಿಸಿ ಸಿನಿಮಾ ರಂಗದ ಕಲಾವಿದರಿಗೆ ನೆರವಾಗುವ ಭರವಸೆ ನೀಡಿದ್ದರು. ಸಂಕಷ್ಟದಲ್ಲಿರುವ 3 ಸಾವಿರಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಕುಟುಂಬಗಳಿಗೆ ನಾನು ಸಂಪಾದನೆ ಮಾಡಿರುವ ಸ್ವಂತ ಹಣದಿಂದ ತಲಾ 5 ಸಾವಿರ ರೂಪಾಯಿ ನೀಡುತ್ತಿರುವುದಾಗಿ ಟ್ವೀಟ್ ಮಾಡಿದ್ದರು.. ಇದೀಗ ತಾವು ಕೊಟ್ಟ ಭರವಸರೆಯನ್ನೆ ಈಡೇರಿಸಿ ಮಾತು ಉಳಿಸಿಕೊಂಡಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ಹೇಳಿದ್ದ ಒಂದೇ ದಿನದಲ್ಲಿ ಕಾರ್ಯ ಆರಂಭ ಮಾಡಿರುವ ನಟ ಯಶ್, ಹಲವಾರು ಮಂದಿ ಕಾರ್ಮಿಕರಿಗೆ, ಕಲಾವಿದರ ಖಾತೆಗಳಿಗೆ 5000 ಹಣ ಜಮಾವಣೆ ಮಾಡಿದ್ದಾರೆ.
ಮೀಸೆ ಪ್ರಕಾಶ್, ಮಂಜೇಗೌಡ, ಮೈಸೂರು ಶಿವಪ್ರಕಾಶ್ ಇನ್ನೂ ಹಲವಾರು ಮಂದಿ ಕಲಾವಿದರು, ಸಿನಿಮಾ ಕಾರ್ಮಿಕರುಗಳು ತಮ್ಮ ಖಾತೆಗೆ ಯಶ್ ಹಾಕಿರುವ ಹಣ ಬಂದಿರುವುದಾಗಿ ಖಾತ್ರಿ ಪಡಿಸಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣ ಮೂಲಕ ಯಶ್ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ 5000 ಹಣವನ್ನು ಖಾತೆಗೆ ಹಾಕುವುದಾಗಿ ಯಶ್ ಹೇಳಿದ್ದರು. ಅದರಂತೆ 1.50 ಕೋಟಿ ರುಪಾಯಿಗಳನ್ನು ಯಶ್ ಸಿನಿಮಾ ಕಾರ್ಮಿಕರು ಮತ್ತು ಕಲಾವಿದರಿಗೆ ನೀಡುತ್ತಿದ್ದಾರೆ.
ಕಲಾವಿದರ ಹಾಗೂ ಕಾರ್ಮಿಕರ ಖಾತೆಗಳ ಸಂಖ್ಯೆಗಳನ್ನು ಪಡೆದುಕೊಳ್ಳಲು ಒಕ್ಕೂಟ ಹಾಗೂ ಅಕಾಡೆಮಿಯ ನೆರವನ್ನು ಯಶ್ ಪಡೆದುಕೊಂಡಿದ್ದಾರೆ. ಸಾ.ರಾ.ಗೋವಿಂದು ಸೇರಿದಂತೆ ಹಲವರು ಯಶ್ಗೆ ಈ ಮಹತ್ ಕಾರ್ಯದಲ್ಲಿ ನೆರವು ನೀಡಿದ್ದಾರೆ. ಯಶ್ ತಮ್ಮ ದುಡಿಮೆಯ ಹಣದಿಂದ ಸಿನಿ ಕಾರ್ಮಿಕರು, ಕಲಾವಿದರ ಕುಟುಂಬಗಳಿಗೆ ನೆರವಾಗಿದ್ದಾರೆ. ಅದಕ್ಕೂ ಮುನ್ನ ನೆರವಿನ ಗೋಷಣೆ ಮಾಡಿದ್ದಾಗ , ‘ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಮ್ಮಿ ಬುಡಮೇಲು ಮಾಡಿದೆ. ಅದರಲ್ಲೂ ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ. ಹೌದ ಇದು ಬರೀ ಮಾತನಾಡುವ ಸಮಯವಲ್ಲ. ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ.
ಹಾಗಾಗಿ, ಸುಮಾರು 3000ಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5000 ರೂಪಾಯಿಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದರು ಯಶ್.
ಜೊತೆಗೆ ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲಾ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ…ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ ಎಂದು ಯಶ್ ಮನವಿ ಮಾಡಿದ್ದರು. ಯಶ್ ಅವರ ಸಮಾಜಮುಖಿ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.








