ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸದೊಂದು ವಿಡಿಯೋ ಶೇರ್ ಮಾಡಿಕೊಂಡಿರುವ ಯಶ್ ಫ್ಯಾನ್ಸ್ ಗಳಿಗೆ ಸ್ವತಂತ್ರ್ಯ ದಿನಾಚರಣೆಗೆ ಗಿಫ್ಟ್ ಕೊಡುವ ಜೊತೆಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿನೂ ಕ್ರಯೇಟ್ ಮಾಡಿದ್ದಾರೆ.
ಹೌದು ಯಶ್ ಅವರು ಹಾಕಿರುವ ವಿಡಿಯೋದಲ್ಲಿ “ ಕಮಿಂಗ್ ಸೂನ್ , ಹೀರೋ ನಹೀನ್ ವಿಲ್ಲನ್” ಅಂದ್ರೆ ಈ ಬಾರಿ ಹೀರೋ ಆಗಿ ಎಂಟ್ರಿ ಕೊಡುವುದಿಲ್ಲ ವಿಲನ್ ಆಗಿ ಎಂದು ಅಭಿಮಾನಿಗಳ ತಲೆ ಕೆಡಿಸಿದ್ದಾರೆ ರಾಕಿಂಗ್ ಸ್ಟಾರ್. ಇನ್ನೂ ವಿಡಿಯೋದಲ್ಲಿ ಅವರ ಮುಖ ಸ್ಪಷ್ಟವಾಗಿ ಕಾಣಿಸದೇ ಹೋದರೂ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗದೇ ಇರೋಕೆ ಚಾನ್ಸೇ ಇಲ್ಲ. ಅಷ್ಟರ ಮಟ್ಟಿಗೆ ಯಶ್ ಅವರ ಖದರ್ ಇದೆ. ಆದರೆ ಎಲ್ಲರೂ ಸಾಮಾನ್ಯವಾಗಿ ಅಂದುಕೊಳ್ಳುವಂತೆ ಇದು ಕೆಜಿಎಫ್ ಚಾಪ್ಟರ್ 2 ನ ಅಪ್ ಡೇಟೇನಲ್ಲ. ಬದಲಾಗಿ ಆಡ್ ಒಂದರ ಪ್ರೋಮೋ.
https://www.instagram.com/p/CD5mThZHPKm/?utm_source=ig_web_button_share_sheet
ಹೌದು ಯಶ್ ಈ ಹಿಂದೆಯೂ ಕೊರೊನಾ ಕುರಿತಾದ ಜಾಹೀರಾತಿನಲ್ಲಿ ಕಾಣಿಸಿಕೊಮಡಿದ್ದರು. ಇದೀಗ ಮತ್ತೊಂದು ಕಮರ್ಷಿಯಲ್ನಲ್ಲಿ ಕಾಣಿಸಿಕೊಂಡಿದ್ದು, ಆಗಸ್ಟ್ 17ರಂದು ಈ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಳ್ಳಲಿದ್ದಾರೆ.









