ಕನ್ನಡ ನಿರ್ದೇಶಕನ ಜೊತೆ ಪ್ಯಾನ್ ಇಂಡಿಯಾ ಸಿನಿಮಾಗೆ OK ಎಂದ ‘ರಾಖಿ ಭಾಯ್’..!
ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಹೈಓಲ್ಟೇಜ್ ಪ್ಯಾನ್ ಇಂಡಿಯಾ ಸಿನಿಮಾವಾದ ಕೆಜಿಎಫ್ ನ ಬಳಿಕ ರಾಖಿ ಭಾಯ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಅವರ ಖದರ್ ಬದಲಾಗಿಹೋಗಿದೆ. ಇಂಡಿಯಾದ ಬಿಗ್ ಸ್ಟಾರ್ ಆಗಿ ರಾಖಿ ಭಾಯ್ ಗುರುತಿಸಿಕೊಂಡಿದ್ದು, ಪರಭಾಷಾ ಅಭಿಮಾನಿಗಳ ಬಳಗವನ್ನೂ ಹೊಂದಿದ್ದಾರೆ. ಹೀಗಿರೋವಾಗ KGF ನ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಸಹಜವಾಗಿಯೇ ಅಭಿಮಾನಿಗಳಲ್ಲಿ ಇರುತ್ತೆ.
ಇದೀಗ ಹೊಸ ಸುದ್ದಿಯ ಪ್ರಕಾರ ಯಶ್ ಅವರು ತಮಿಳಿನ ಸೂಪರ್ ಹಿಟ್ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಸಿನಿಮಾಕ್ಕೂ ಮುನ್ನಾ ಕನ್ನಡದ ನಿರ್ದೇಶಕನ ಸಿನಿಮಾಕ್ಕೆ ಎಸ್ ಎಂದಿದ್ದಾರೆ ಎನ್ನಲಾಗುತ್ತಿದೆ.
ವಾವ್ಹಾ…! ಆಸ್ಪತ್ರೆ ಮೆನುವಿನಲ್ಲಿ ಚಿಕನ್ ಸಾಂಬಾರ್ : ರೋಗಿಗಳಿಗೆ ಮಾತ್ರ..!
ಹೌದು ಮಫ್ತಿ ಸೇರಿ ಹಲವಾರು ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿರುವ ನರ್ತನ್, ಯಶ್ ಅವರ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದು, ಈಗಾಗಲೇ ರಾಖಿ ಭಾಯ್ ಗೆ ಕಥೆ ಹೇಳಿದ್ದಾರೆ ಎನ್ನಲಾಗ್ತಿದೆ. ಅಲ್ದೇ ನರ್ತನ್ ಸಿನಿಮಾಕ್ಕೆ ಯಶ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗ್ತಿದೆ. ಈ ಸಿನಿಮಾದ ಚಿತ್ರೀಕರಣವು ಶಂಕರ್ ಸಿನಿಮಾಕ್ಕೂ ಮುನ್ನವೇ ಪ್ರಾರಂಭವಾಗಲಿದೆಯಂತೆ. ಅದು ಅಲ್ದೇ ಈ ಸಿನಿಮಾವೂ ಸಹ ಪ್ಯಾನ್ ಇಂಡಿಯಾ ಸಿನಿಮಾಗಿರಲಿದೆ ಎನ್ನಲಾಗ್ತಿದ್ದು, ಯಶ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇತ್ತ ರೋಬೊ, ಇಂಡಿಯನ್, ಅನ್ನಿಯನ್ ನಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಶಂಕರ್ ಅವರ ಮುಂದಿನ ಸಿನಿಮಾದಲ್ಲಿ ಯಶ್ ನಟಿಸುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಈ ಸಿನಿಮಾದಲ್ಲಿ ಯಶ್ ಜೊತೆಗೆ ತೆಲುಗಿನ ರಾಮ್ ಚರಣ್ ತೇಜ ಸಹ ಇರಲಿದ್ದಾರೆ ಎನ್ನಲಾಗಿದೆ. ಆದ್ರೆ ಇದಕ್ಕೂ ಮೊದಲು ಯಶ್ ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
‘ಆತ್ಮಹತ್ಯೆಗೆ ಶರಣಾಗ್ತೀನಿ’…! ಟ್ವಿಟ್ಟರ್ ನಲ್ಲಿ ಗಳಗಳನೆ ಅತ್ತ ತಮಿಳು ನಟಿ ಮೀರಾ ಮಿಥುನ್..! – video
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







