ಇದು ರೋಜರ್ ಫೆಡರರ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್…!
ಇದು ರೋಜರ್ ಫೆಡರರ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್. ಒಂದು ಕಡೆ ಕೊರೋನಾ ವೈರಸ್ ಹಾವಳಿ.. ಮತ್ತೊಂದು ಕಡೆ ಗಾಯದ ಸಮಸ್ಯೆ. ಇದು ಸದ್ಯ ರೋಜರ್ ಫೆಡರರ್ ಅವರನ್ನು ಕಾಡುತ್ತಿರುವ ಸಮಸ್ಯೆಗಳು. 38ರ ಹರೆಯದ ರೋಜರ್ ಫೆಡರರ್‍ಗೆ ಟೆನಿಸ್ ಆಟದ ಮೇಲಿನ ಪ್ರೀತಿ ಇನ್ನೂ ಕಮ್ಮಿಯಾಗಿಲ್ಲ. ಪ್ರಶಸ್ತಿ ಗೆಲ್ಲಬೇಕು ಅನ್ನೋ ಹಸಿವು ಇನ್ನೂ ನೀಗಿಲ್ಲ. ಫಿಟ್ ಆಂಡ್ ಫೈನ್ ಆಗಿರುವ ಫೆಡರರ್ ಸದ್ಯ ನೋವಿನಿಂದ ಬಳಲುತ್ತಿದ್ದಾರೆ.
20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಫೆಡರರ್‍ಗೆ ಈಗ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಕಬ್ಬಿಣದ ಕಡಲೆಯಾಗಿದೆ. ಆದ್ರೂ ಹಠ ಮತ್ತು ಛಲವನ್ನು ಬಿಡುತ್ತಿಲ್ಲ. ಈ ನಡುವೆ ಫೆಡರರ್ ಅವರು ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಹೀಗಾಗಿ ನೋವಿನಿಂದ ಚೇತರಿಸಿಕೊಂಡ್ರೂ ಆಡಲು ಅವರು ಫುಲ್ ಫಿಟ್ ಆಗಿಲ್ಲ. ಈ ಬಗ್ಗೆ ತಮ್ಮ ಅಭಿಮಾನಿಗಳಿಗೆ ಫೆಡರರ್ ಸಂದೇಶವನ್ನು ರವಾನಿಸಿದ್ದಾರೆ.
ಪ್ರೀತಿಯ ಅಭಿಮಾನಿಗಳೇ, ನೀವೆಲ್ಲರೂ ಮನೆಯಲ್ಲಿ
ಆರೋಗ್ಯ ಹಾಗೂ ಸುರಕ್ಷಿತವಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಬಲ ಮೊಣ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದೆ. ಹಾಗೇ ಚೇತರಿಸಿಕೊಳ್ಳುತ್ತಿದೆ. ಆದ್ರೆ ಕೆಲವು ವಾರಗಳ ಹಿಂದೆ ಚೇತರಿಕೆಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ನಾನು ಹಂಡ್ರೆಡ್ ಪರ್ಸೆಂಟ್ ಫಿಟ್ ಆಗಬೇಕು. ಆಗ ಮಾತ್ರ ಸ್ಪರ್ಧಾತ್ಮಕವಾಗಿ ಆಡಲು ಸಾಧ್ಯ, ಈ ವರ್ಷ ನಾನು ನನ್ನ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. 2021ರ ಋತುವಿನಲ್ಲಿ ನಾನು ಮತ್ತೆ ಅಂಗಣದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಆಲ್ ದಿ ಬೆಸ್ಟ್ ಅಂತ ರೋಜರ್ ಫೆಡರರ್ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ.
ತಾಳ್ಮೆಯ ಜೊತೆ ಆಕ್ರಮಣಕಾರಿಯಾಗಿ ಆಡುವ ಫೆಡರರ್ ಆಟವನ್ನು ನೋಡುವುದೇ ಚೆಂದ. ಸೈಲೆಂಟಾಗಿಯೇ ಎದುರಾಳಿಯನ್ನು ಮಣಿಸುವಂತಹ ಚಾಣಕ್ಯ ಆಟಗಾರ. ಆದ್ರೆ ಈ ವರ್ಷ ಫೆಡರರ್ ಆಟವನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಫ್ರೆಂಚ್ ಓಪನ್ ಟೂರ್ನಿಯನ್ನು ಮುಂದೂಡಲಾಗಿದೆ. ವಿಂಬಲ್ಡನ್ ಟೂರ್ನಿ ಈ ವರ್ಷ ರದ್ದಾಗಿದೆ. ಯುಎಸ್ ಓಪನ್ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಜೊತೆಗೆ ಇನ್ನಿತರ ಟೂರ್ನಿಗಳು ನಡೆಯುವುದು ಕೂಡ ಕಷ್ಟ,








