25ರಂದು ಬಂಧಿತ ರೋಹಿಂಗ್ಯಾ ಸಮುದಾಯದವರ ಬಿಡುಗಡೆಯ ಅರ್ಜಿ ವಿಚಾರಣೆ..!
ನವದೆಹಲಿ: ಜಮ್ಮುವಿನಲ್ಲಿ ಅಕ್ರಮವಾಗಿ ನುಸುಳಿದ್ದ ಪರಿಣಾಮ ಬಂಧನದಲ್ಲಿರುವ ಸುಮಾರು 170 ಮಂದಿ ರೋಹಿಂಗ್ಯಾ ಸಮುದಾಯವರನ್ನ ಬಿಡುಗಡೆ ಮಾಡುವಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಮಾ.25ರಂದು ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ.
ರೋಹಿಂಗ್ಯಾ ಸಮುದಾಯದವರಿಗೆ ಆಶ್ರಯ ನೀಡಿದ್ದ ಮೊಹಮ್ಮದ್ ಸಲೀಮುಲ್ಲಾ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದಾರೆ. ರಾಯಭಾರ ಕಚೇರಿಯ ಪರಿಶೀಲನೆಯ ನಂತರ ಇವರು ಮ್ಯಾನ್ಮಾರ್ ಗೆ ಗಡೀಪಾರು ಆಗುವ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಲ್ಲದೇ ರೋಹಿಂಗ್ಯಾ ಸಮುದಾಯದವರ ಬಂಧನ ಕಾನೂನುಬಾಹಿರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ವಾಹನದ ಮೇಲೆ ಡ್ರಗ್ ಗ್ಯಾಂಗ್ ಗುಂಡಿನ ದಾಳಿ : 13 ಅಧಿಕಾರಿಗಳ ಹತ್ಯೆ..!








